IDFC First Bank ವಂಚನೆ ಪ್ರಕರಣ: ತನಿಖೆಗೆ ಆದೇಶಿಸಿದ ಹರಿಯಾಣ CM ಸೈನಿ

"ಬ್ಯಾಂಕ್ ಉದ್ಯೋಗಿಯಾಗಿರಲಿ ಅಥವಾ ಯಾವುದೇ ಸರ್ಕಾರಿ ಉದ್ಯೋಗಿಯಾಗಿರಲಿ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸೈನಿ ಹೇಳಿದರು.
Probe ordered into Rs 590-crore IDFC First Bank fraud: Saini
ನಯಬ್ ಸಿಂಗ್ ಸೈನಿ
Updated on

ಚಂಡೀಗಢ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್​ನ ಚಂಡೀಗಡ ಶಾಖೆಯಲ್ಲಿ 590 ಕೋಟಿ ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದ ಒಂದು ದಿನದ ನಂತರ ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ಅವರು ಸೋಮವಾರ ತನಿಖೆಗೆ ಆದೇಶಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷ ಕಾಂಗ್ರೆಸ್, ವಿಧಾನಸಭೆಯಲ್ಲಿ ಪ್ರಕರಣವನ್ನು ಪ್ರಸ್ತಾಪಿಸಿತು. ಇದಕ್ಕೆ ಉತ್ತರಿಸಿದ ಸೈನಿ ತನಿಖೆಗೆ ಆದೇಶಿಸಲಾಗಿದೆ. ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಜಿಲೆನ್ಸ್ ಇಲಾಖೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಸದನಕ್ಕೆ ಭರವಸೆ ತಿಳಿಸಿದರು.

ನಾಲ್ಕೈದು ದಿನಗಳ ಹಿಂದೆ ಸರ್ಕಾರಕ್ಕೆ ಈ ವಿಷಯದ ಬಗ್ಗೆ ತಿಳಿದುಬಂದಿದೆ, ನಂತರ ತನಿಖೆ ಆರಂಭಿಸಲಾಗಿದೆ ಎಂದು ಅವರು ವಿಧಾನಸಭೆಗೆ ಮಾಹಿತಿ ನೀಡಿದರು.

Probe ordered into Rs 590-crore IDFC First Bank fraud: Saini
ಬೆಂಗಳೂರು: ಸೈಬರ್ ವಂಚನೆ; ಬ್ಯಾಂಕ್ ವಿವರ ಕಳುಹಿಸಿ 7 ಕೋಟಿ ರೂ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ!

"ಬ್ಯಾಂಕ್ ಉದ್ಯೋಗಿಯಾಗಿರಲಿ ಅಥವಾ ಯಾವುದೇ ಸರ್ಕಾರಿ ಉದ್ಯೋಗಿಯಾಗಿರಲಿ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಸೈನಿ ಹೇಳಿದರು.

ಏತನ್ಮಧ್ಯೆ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕೇಂದ್ರ ಬ್ಯಾಂಕ್ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಯಾವುದೇ ಅಪಾಯವಿಲ್ಲ ಎಂದು ಭರವಸೆ ನೀಡಿದ್ದಾರೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಚಂಢೀಗಡ ಶಾಖೆಯ ಸಿಬ್ಬಂದಿಯಿಂದ ವಂಚನೆ ನಡೆದಿರುವ ಆರೋಪ ಇದೆ. ಹರಿಯಾಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಕೌಂಟ್​ಗಳಲ್ಲಿ ಅನಧಿಕೃತ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸರ್ಕಾರವು ಈ ಅಕೌಂಟ್​ಗಳನ್ನು ಮುಚ್ಚಲು ಹೋದಾಗ ಅಕೌಂಟ್ ಬ್ಯಾಲನ್ಸ್​ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗ ಒಟ್ಟು 590 ಕೋಟಿ ರೂ ಹಣಕಾಸು ಅಕ್ರಮ ನಡೆದಿರುವುದು ಗೊತ್ತಾಗಿದೆ. ಈ ಬ್ಯಾಂಕ್​ನ ಮೂರನೇ ಕ್ವಾರ್ಟರ್​ನ ನಿವ್ವಳ ಆದಾಯವೇ 503 ಕೋಟಿ ರೂ ಇದೆ. ಅದಕ್ಕಿಂತಲೂ ಹೆಚ್ಚಿನ ಮೊತ್ತದ ಅಕ್ರಮವನ್ನು ಕೆಲ ಸಿಬ್ಬಂದಿ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com