ಅಕ್ಷತಾ ಶ್ರೀನಿವಾಸ್ 
ಸಿನಿಮಾ ಸುದ್ದಿ

'ಬ್ರಹ್ಮಚಾರಿ' ನನಗಾಗಿ ಮತ್ತೆ ಮಾಡುತ್ತಿರುವ ಸಿನಿಮಾದಂತಿದೆ: ಅಕ್ಷತಾ ಶ್ರೀನಿವಾಸ್

ಹೊಸ ಹಿರೋಯಿನ್ ಅಕ್ಷತಾ ಶ್ರೀನಿವಾಸ್ ಗೆ ಡಬಲ್ ದಮಾಕಾ, ಮಂಗಳೂರಿನ ಚೆಲುವೆ ಏಕಕಾಲದಲ್ಲಿ ಎರಡು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಹೊಸ ಹಿರೋಯಿನ್ ಅಕ್ಷತಾ ಶ್ರೀನಿವಾಸ್ ಗೆ ಡಬಲ್  ದಮಾಕಾ, ಮಂಗಳೂರಿನ ಚೆಲುವೆ ಏಕಕಾಲದಲ್ಲಿ ಎರಡು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾ ಶಿವ ತೇಜಸ್ಸು ಸಿನಿಮಾದ ಅಡಿಷನ್ ನಲ್ಲಿ ಪಾಲ್ಗೊಂಡಿದ್ದ ಅಕ್ಷತಾ ಅಲ್ಲಿ ಅವಕಾಶ ಪಡೆಯುವುದರ ಜೊತೆಗೆ ಬ್ರಹ್ಮಾಚಾರಿ ಸಿನಿಮಾ ನಿರ್ಮಾಪಕರ ಗಮನ ಸೆಳೆದಿದ್ದಾರೆ.

ಚಂದ್ರ ಮೋಹನ್ ನಿರ್ದೇಶನದ ಬ್ರಹ್ಮಚಾರಿ 100  ಪರ್ಸೆಂಟ್ ವರ್ಜಿನ್ ಚಿತ್ರಕ್ಕಾಗಿ ಎರಡನೇ ಹಿರೋಯಿನ್ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಅಕ್ಷತಾ ಪಿಟ್ ಎನಿಸಿದ್ದಾರೆ.ಇದರಿಂದ ಎಕ್ಸೈಟ್ ಆಗಿರುವ ಅಕ್ಷತಾ ಶ್ರೀನಿವಾಸ್, ಪರಸಂಗ ಸಿನಿಮಾ ಮೂಲಕ  ಸಿನಿಮಾ ವೃತ್ತಿ ಆರಂಭಿಸಿದೆ. ಬ್ರಹ್ಮಾಚಾರಿ  ನನಗಾಗಿ ಮತ್ತೆ ಮಾಡುತ್ತಿರುವ ಸಿನಿಮಾದಂತಿದೆ ಎಂದು ಹೇಳಿದರು.ಈ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಉದಯ್ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿ ಪ್ರಧಾನ ಪಾತ್ರ ಮಾಡುತ್ತಿದ್ದಾರೆ. ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ದಿನ ಶಿವ ತೇಜಸ್ಸು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರೆ ಮೂರು ದಿನ ಬ್ರಹ್ಮಚಾರಿ ಚಿತ್ರದ ಚಿತ್ರೀಕರಣ ಮುಗಿಸಿರುವುದಾಗಿ ತಿಳಿಸಿದ್ದಾರೆ. ಮಂಗಳೂರಿನಿಂದ ಈಗ ಬೆಂಗಳೂರಿಗೆ ಅಕ್ಷತಾ ಶ್ರೀನಿವಾಸ ಸ್ಥಳಾಂತರವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!