ವಿ ಹರಿಕೃಷ್ಣ-ವಾಣಿ ಹರಿಕೃಷ್ಣ 
ಸಿನಿಮಾ ಸುದ್ದಿ

ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ದಾಂಪತ್ಯದಲ್ಲಿ ಅಪಸ್ವರ?

ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ವಾಣಿ ದಂಪತಿ ಜೀವನದಲ್ಲಿ ಮುನಿಸು ಕಾಣಿಸಿಕೊಂಡಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.

ಬೆಂಗಳೂರು: ಸ್ಯಾಂಡಲ್ವುಡ್ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ವಾಣಿ ದಾಂಪತ್ಯ ಜೀವನದಲ್ಲಿ ಮುನಿಸು ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು. ಕುರುಕ್ಷೇತ್ರ ಮತ್ತು ರಾಂಧವ ಚಿತ್ರದಲ್ಲಿ ಹಾಡಿದ್ದ ವಾಣಿ ಹರಿಕೃಷ್ಣ ಅವರ ಹಾಡುಗಳನ್ನು ತೆಗೆದು ಹಾಕಲಾಗಿದೆ. ವಿ. ಹರಿಕೃಷ್ಣ ಅವರು ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ಒಂದು ಹಾಡನ್ನು ವಾಣಿ ಅವರಿಂದ ಹಾಡಿಸಲಾಗಿತ್ತು. ಆದರೆ ಚಿತ್ರದ ಆಡಿಯೋ ಬಿಡುಗಡೆಯಾದ ನಂತರ ವಾಣಿ ಹಾಡಿದ್ದ ಹಾಡನ್ನು ಬೇರೆಯವರು ಹಾಡಿರುವುದು ಗೊತ್ತಾಗಿ ವಾಣಿ ಅವರು ಬೇಸರಗೊಂಡಿದ್ದರು. 
ಇನ್ನು ರಾಂಧವ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಶಿಷ್ಯ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದು ಈ ಚಿತ್ರದಲ್ಲೂ ವಾಣಿ ಅವರು ಹಾಡಿದ್ದ ಹಾಡನ್ನು ಕಿತ್ತು ಹಾಕಲಾಗಿದೆ. ಈ ಎರಡು ಘಟನೆಗಳಿಂದ ಬೇಸರಗೊಂಡಿರುವ ವಾಣಿ ಅವರು ಫೇಸ್ ಬುಕ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ವಾಣಿ ಹರಿಕೃಷ್ಣ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ 'ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ, ಈಗ " ಕುರುಕ್ಷೇತ್ರ" ಹಾಗೂ "ರಾಂಧವ" ಚಿತ್ರ ಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ ಎಂದು ಬರೆದುಕೊಂಡಿದ್ದಾರೆ. 
ಈ ಘಟನೆ ಸದ್ಯ ಹರಿಕೃಷ್ಣ ದಾಂಪತ್ಯದಲ್ಲಿ ಮುನಿಸಿಗೆ ಕಾರಣವಾಗಿದೆಯಾ ಎಂಬ ವಿಚಾರ ಕೇಳಿಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!