ಸಿನಿಮಾ ಸುದ್ದಿ

ಬ್ಯೂಟಿ ಕ್ವೀನ್ ಕಾಜಲ್ ಅಗರ್ ವಾಲ್ ಗಾಗಿ 60 ಲಕ್ಷ ರು. ಕಳೆದುಕೊಂಡ ಭೂಪ!

Shilpa D
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ. ತಮಿಳುನಾಡಿನ ರಾಮನಾಥಪುರಂ ನಿವಾಸಿಯಾಗಿರುವ ಅಭಿಮಾನಿ ಕಾಜಲ್ ಅಪ್ಪಟ ಅಭಿಮಾನಿಯಾಗಿದ್ದಾನೆ.
ಕಾಜಲ್ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿ ಆಗಬೇಕು ಎಂದುಕೊಂಡಿದ್ದನು. ಈ ವೇಳೆ ಇನ್‍ಸ್ಟಾಗ್ರಾಂ ಪೇಜ್ ಒಂದು ಕಾಜಲ್ ಅಗರ್ ವಾಲ್ ಅವರನ್ನು ಭೇಟಿಯಾಗುವ ಅವಕಾಶವನ್ನು ನೀಡಿತ್ತು. ಇದನ್ನು ನೋಡಿದ ಅಭಿಮಾನಿ ವೆಬ್ ಪೇಜ್ ಆಡ್ಮಿನ್‍ನನ್ನು ಸಂಪರ್ಕಿಸಿ ಕಾಜಲ್ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದನು.
ವೆಬ್ ಪೇಜ್ ಆಡ್ಮಿನ್ ಮೊದಲು ಅಭಿಮಾನಿಯ ಬಳಿ 50 ಸಾವಿರ ರೂ. ತೆಗೆದುಕೊಂಡಿದ್ದಾನೆ. ಅಲ್ಲದೆ ಅಭಿಮಾನಿಯ ಫೋಟೋ ಹಾಗೂ ವೈಯಕ್ತಿಕ ಮಾಹಿತಿಯನ್ನು ಕೇಳಿದ್ದಾನೆ. ಕಾಜಲ್‍ರನ್ನು ಭೇಟಿ ಮಾಡುವ ಖುಷಿಯಲ್ಲಿ ಅಭಿಮಾನಿ ಯೋಚಿಸದೇ ಎಲ್ಲ ವಿವರವನ್ನು ಆಡ್ಮಿನ್ ಬಳಿ ಹಂಚಿಕೊಂಡಿದ್ದಾನೆ. ಈ ವೆಬ್ ಪೇಜ್ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದು, ಕಾಜಲ್ ಅಭಿಮಾನಿಯನ್ನು ಯಾಮಾರಿಸಿದೆ.
ಅಭಿಮಾನಿ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದ್ದಾನೆ ಎನ್ನುವುದು ಗೊತ್ತಾದ ಬಳಿಕ ಈ ಗ್ಯಾಂಗ್ ಸದಸ್ಯರು ಪ್ರತಿದಿನ ಆತನಿಂದ ಹಣ ವಸೂಲಿ ಮಾಡುತ್ತಿದ್ದರು. ಹಣ ಪಡೆದ ನಂತರ ಕಾಜಲ್ ಭೇಟಿ ಬಗ್ಗೆ ಮಾತನಾಡದೇ ಇದ್ದಾಗ ಅಭಿಮಾನಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ.
SCROLL FOR NEXT