ಸಿನಿಮಾ ಸುದ್ದಿ

'ರಾಂಧವ' ಚಿತ್ರ ನನ್ನ ವೃತ್ತಿ ಜೀವನದಲ್ಲಿ ವಿಶೇಷ ಸಿನಿಮಾ; ಭುವನ್ ಪೊನ್ನಣ್ಣ 

Sumana Upadhyaya

ನಟ ಭುವನ್ ಪೊನ್ನಣ್ಣ 2009ರಲ್ಲಿ ಚಿತ್ರೋದ್ಯಮದಲ್ಲಿ ವೃತ್ತಿ ಆರಂಭಿಸಿದಾಗ ಒಂದು ಪ್ರಮಾಣ ಮಾಡಿದ್ದರು. ಅದು 2108ರಲ್ಲಿ ಹಿಮಾಲಯಕ್ಕೆ ಟ್ರಕ್ ಹೋಗುತ್ತೇನೆಂದು.


ಕಳೆದ ವರ್ಷಾಂತ್ಯಕ್ಕೆ ರಾಂಧವ ಚಿತ್ರದ ಶೂಟಿಂಗ್ ಮುಗಿದ ತಕ್ಷಣ ಕೊಟ್ಟ ಮಾತಿನಂತೆ ಹಿಮಾಲಯಕ್ಕೆ ಹೋಗಿ ಶಿವ ದೇವರ ದರ್ಶನ ಮಾಡಿದರು. ಚಿತ್ರೋದ್ಯಮದಲ್ಲಿ ಹೀರೋ ಆಗಿ ನೆಲೆ ಕಂಡುಕೊಳ್ಳಲು 10 ವರ್ಷ ಹಿಡಿಯಿತು ಎನ್ನುತ್ತಾರೆ ನಟ ಭುವನ್.


ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿನ ಭುವನ್ ಪೊನ್ನಣ್ಣ ಕೂಲ್, ಮಂಜುನಾಥ ಬಿ ಎ ಎಲ್ ಎಲ್ ಬಿ, ಕುಚಿಕು ಕುಚಿಕು ಮೊದಲಾದವುಗಳಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು.


ನಂತರ ಹಾಲಿವುಡ್ ಗೆ ಹೋಗಿ ಅಲ್ಲಿ ಅಭಿನಯ ತರಬೇತಿ ಪಡೆದರು. ಅಲ್ಲಿಂದ ಬಂದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಅಲ್ಲಿ ಜನಪ್ರಿಯತೆ ಸಿಕ್ಕಿತು. ಆದರೆ ನಂತರ ಎರಡು ವರ್ಷ ಸಿನಿಮಾಕ್ಕೆ ಸಹಿ ಹಾಕಿರಲಿಲ್ಲವಂತೆ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ, ಆಗ ರಾಂಧವ ಕಥೆ ಇಷ್ಟವಾಗಿ ಒಪ್ಪಿಕೊಂಡೆ ಎನ್ನುತ್ತಾರೆ ಭುವನ್. 


ಸುನಿಲ್ ಆಚಾರ್ಯ ನಿರ್ದೇಶನದ ರಾಂಧವ ಸಿನಿಮಾಕ್ಕೆ ಪುನರ್ ಜನ್ಮ ಎಂಬ ಶೀರ್ಷಿಕೆಯಿದೆ.ಅದರಲ್ಲಿ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಸುಮಾರು ಎರಡು ವರ್ಷ ಚಿತ್ರ ಮುಗಿಸಲು ಹಿಡಿಯಿತಂತೆ. ರಾಂಧವ ನನ್ನ ವೃತ್ತಿ ಜೀವನಲ್ಲಿ ವಿಶೇಷ ಸಿನಿಮಾವಾಗಿದೆ, ಅದರಲ್ಲಿನ ಅಭಿನಯ ಖುಷಿ ನೀಡಿದೆ ಎನ್ನುತ್ತಾರೆ ಭುವನ್ ಪೊನ್ನಣ್ಣ.

SCROLL FOR NEXT