ಸಿನಿಮಾ ಸುದ್ದಿ

'ಬಜಾರ್' ನಾಯಕ ಧನ್ವೀರ್ ಎರಡನೇ ಚಿತ್ರಕ್ಕೆ ಟೈಟಲ್ ಫಿಕ್ಸ್!

Raghavendra Adiga

ನಟ ಧನ್ವೀರ್ ಮುಂಬರುವ ಚಿತ್ರಕ್ಕೆ ನಿರ್ದೇಶಕರು ಯಾರೆಂದೇ ಇನ್ನೂ ಅಂತಿಮವಾಗದೆ ಹೋದರೂ ಚಿತ್ರದ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ.ಇದಾಗಲೇ "ಬಜಾರ್" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಧನ್ವೀರ್ ಮುಂದಿನ ಚಿತ್ರಕ್ಕೆ "ಬಂಪರ್" ಎಂದು ಹೆಸರನ್ನಿಡಲಾಗಿದೆಯಂತೆ.

ಸುನಿಯ "ಬಜಾರ್" ಮೂಲಕ ನಾಯಕ ನಟನಾದ ಧನ್ವೀರ್ ತಮ್ಮ ಮುಂದಿನ ಚಿತ್ರಕ್ಕೆ ನಿರ್ದೇಶಕ ಚೇತನ್ ಕುಮಾರ್ ಬರೆದ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಅವರು ಚಿತ್ರಕಥೆ ಮತ್ತು ಸಂಭಾಷಣೆಗಳಲ್ಲಿಯೂ ಕೆಲಸ ಮಾಡಿದ್ದಾರೆ.

"ಭರಾಟೆ" ನಂತರ ನಿರ್ಮಾಪಕ ಸುಪ್ರೀತ್‌ಗೆ ಇದು ಎರಡನೇ ಚಿತ್ರವಾಗಿದೆ.ಫ್ಯಾಮಿಲಿ ಎಂಟರ್‌ಟೈನರ್‌ಗಾಗಿ ನಟ-ನಿರ್ಮಾಪಕ ಜೋಡಿ ಒಟ್ಟಿಗೆ ಸೇರಿದ್ದು ಇದಕ್ಕಾಗಿ ಅವರು ಗುರುದತ್ತ ಗಾಣಿಗ , ಸುನಿಲ್ ತಲ್ಸಾ ಹಾಗೂ  ನವೀನ್ ರೆಡ್ಡಿ ಸೇರಿದಂತೆ ಕೆಲವು ಕನ್ನಡ ನಿರ್ದೇಶಕರನ್ನು ಸಂಪರ್ಕಿಸಿದ್ದಾರೆ. ಆದಾಗ್ಯೂ, ಪ್ರೊಡಕ್ಷನ್ ಹೌಸ್ ಇನ್ನೂ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ.ಅಲ್ಲದೆ ಚಿತ್ರದ ನಟವರ್ಗ, ಸಿಬ್ಬಂದಿಗಳ ಆಯ್ಕೆಯೂ ನಡೆಯಬೇಕಿದೆ.

SCROLL FOR NEXT