ಸಿನಿಮಾ ಸುದ್ದಿ

ಕುಸ್ತಿ, ಬಾಕ್ಸಿಂಗ್ ವಿಜೃಂಭಣೆಯ 'ಪೈಲ್ವಾನ್ '- ನಿರ್ದೇಶಕ ಕೃಷ್ಣ

Nagaraja AB

ಬೆಂಗಳೂರು: ಕುಸ್ತಿ ಹಾಗೂ ಬಾಕ್ಸಿಂಗ್ ರೋಮಾಂಚಕ ಪ್ರದರ್ಶನಗಳನ್ನು  ಹಿನ್ನೆಲೆಯಾಗಿಟ್ಟುಕೊಂಡು ಕೃಷ್ಣ ನಿರ್ದೇಶಿಸಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸಾಹಸ ಪ್ರಧಾನ ಶಾಟ್ ಗಳಿಂದ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. 

ಈ ಚಿತ್ರದ ಮೂಲಕ ವಾಸ್ತವದೊಂದಿಗೆ  ಕಮರ್ಷಿಯಲ್ ಆಕ್ಸನ್  ತೋರಿಸುವುದರೊಂದಿಗೆ  ನಿರ್ದೇಶಕ ಕೃಷ್ಣ ಹೊಸ ಮೈಲುಗಲ್ಲು ದಾಟಿದ್ದಾರೆ. ಈ ಸಾಧನೆಗೆ  ಸಾಹಸ ನಿರ್ದೇಶಕರಾದ ರಾಮ್ ಲಕ್ಷ್ಮಣ್ ಸಹೋದರರು ಹಾಗೂ ರವಿ ವರ್ಮ ಹಾಗೂ ವಿಜಯ್ ಸಾಥ್ ನೀಡಿದ್ದಾರೆ. ಇವರಲ್ಲದೆ ಅಂತಾರಾಷ್ಟ್ರೀಯ ಸಾಹಸ ನಿರ್ದೇಶಕರಾದ ಲಾರ್ನೆಲ್ ಸ್ಟೊವಾಲ್ ಕೂಡಾ ಈ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ.

ಕ್ಯಾಪ್ಟನ್ ಅಮೆರಿಕಾ, ದಿ ಹಂಗರ್ ಗೇಮ್ಸ್ ಮತ್ತು ಡ್ರಾಗನ್ ಐಸ್  ಮತ್ತಿತರ ಹಾಲಿವುಡ್ ಸಿನಿಮಾಗಳಲ್ಲಿ ಲಾರ್ನೆಲ್ ಸ್ಟೊವಾಲ್   ಭಯಾನಕ ರೀತಿಯಲ್ಲಿ ಸಾಹಸ ನಿರ್ದೇಶನ ಮಾಡಿದ್ದಾರೆ.

ಬಾಕ್ಸಿಂಗ್ ಸಿಕ್ವೆನ್ಸ್ ಚಿತ್ರೀಕರಣಕ್ಕಾಗಿ 38 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಪೈಲ್ವಾನ್ ಚಿತ್ರದ ಪ್ರತಿಯೊಂದು ಆಕ್ಸನ್ ಸಿಕ್ವೆನ್ಸ್ ನ್ನು ಶ್ರಮಪಟ್ಟು ಮಾಡಲಾಗಿದೆ. ಈ ಹಿಂದೆ ಹೆಬ್ಬುಲಿ ಚಿತ್ರದಲ್ಲಿ ಕುಸ್ತಿಯ ಎಪಿಸೋಡ್ ಮಾಡಿದ್ದ ವಿಜಯ್ ಈ ಚಿತ್ರದಲ್ಲಿ ಕೆಲಸ ಮಾಡಿದ್ದು, 14 ದಿನಗಳನ್ನು ತೆಗೆದುಕೊಂಡಿದ್ದಾರೆ. ಇತ್ತಿತರ ಸಾಹಸ ದೃಶ್ಯಗಳನ್ನು ರಾಮ್ ಲಕ್ಷ್ಮಣ್ ಸಹೋದರರು ಮತ್ತು ರವಿಮರ್ಮ  ಸಂಯೋಜಿಸಿರುವುದಾಗಿ ನಿರ್ದೇಶಕ ಕೃಷ್ಣ ತಿಳಿಸಿದ್ದಾರೆ.

ನಟ ಸುದೀಪ್   ಈ ಹಿಂದೆ ಮಾಡದ ರೀತಿಯಲ್ಲಿ  ಬಾಕ್ಸಿಂಗ್, ಕುಸ್ತಿ ಬಗ್ಗೆ ತರಬೇತಿ ಪಡೆದು ಅಭಿನಯಿಸಿದ್ದಾರೆ. ಗಾಯ ಮಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದಲ್ಲಿ ಎಲ್ಲರೂ ಶ್ರಮಪಟ್ಟು ಕೆಲಸ ಮಾಡಿದ್ದು, ಪೈಲ್ವಾನ್ ಚಿತ್ರದಲ್ಲಿ ಸಾಹಸ ಪ್ರಧಾನವಾಗಿದೆ ಎಂದು ಅವರು ಹೇಳಿದ್ದಾರೆ.

ಆರ್ ಆರ್ ಆರ್ ಮೋಷನ್ ಪಿಕ್ಟರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಸೆನ್ಸಾರ್ ಮಂಡಳಿಯ ಒಪ್ಪಿಗೆ ಪಡೆಯಬೇಕಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕಾಂಕ್ಷ ಸಿಂಗ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್ 12 ರಂದು ಐದು ಭಾಷೆಗಳಲ್ಲಿ ಜಗತ್ತಿನಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

SCROLL FOR NEXT