ಸಿನಿಮಾ ಸುದ್ದಿ

'ಅರ್ಜುನ್ ಗೌಡ'ಗಾಗಿ ಕಿಕ್ ಬಾಕ್ಸರ್ ಆದ ಪ್ರಜ್ವಲ್ ದೇವರಾಜ್

Raghavendra Adiga

ಬಾಲಿವುಡ್ ನಲ್ಲಿ ಕ್ರೀಡಾ ಕ್ಷೇತ್ರದ ತಾರೆಯರ ಹಾಗೂ ಕ್ರೀಡೆಯನ್ನೇ ಆಧಾರವಾಗಿರಿಸಿಕೊಂಡು ಚಿತ್ರಗಳು ತಯಾರಾಗುವುದು ಸಾಮಾನ್ಯ. ಇದೀಗ ಕನ್ನಡದಲ್ಲಿಯೂ ನಿಧಾನವಾಗಿ ಅಂತಹುದ್ ಟ್ರೆಂಡ್ ಒಂದು ಬೆಳೆಯುತ್ತಿದೆ.

ಕಿಚ್ಚ ಸುದೀಪ್ ಅಭಿನಯದ "ಅಪಿಲ್ವಾನ್" ಬಳಿಕ ಇದೀಗ ಪ್ರಜ್ವಲ್ ದೇವರಾಜ್ ಅಭಿನಯದ "ಅರ್ಜುನ್ ಗೌಡ" ಚಿತ್ರವು ಈ ವಿಶೇಷ ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ.ತೆಲುಗಿನ ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಚಿತ್ರದಿಂದ ಪ್ರೇರಿತರಾದ ನಿರ್ದೇಶಕ ಲಕ್ಶ್ಮಿ ಶಂಕರ್ ನಾಯಕ ಪ್ರಜ್ವಲ್ ಅವರನ್ನು ತಮ್ಮ ಚಿತ್ರದಲ್ಲಿ ಕಿಕ್ ಬಾಕ್ಸರ್ ಆಗಿ ತೋರಿಸಲಿದ್ದಾರೆ ಎನ್ನಲಾಗಿದೆ.

"ಕ್ರೀಡಾಲೋಕದ ಕಥೆಯ ಹಿನ್ನೆಲೆಯುಳ್ಳ ಈ ಚಿತ್ರದಲ್ಲಿ ಅರ್ಜುನ್ ಗೌಡ ಪಾತ್ರವು ಕಿಕ್ ಬಾಕ್ಸಿಂಗ್ ಅನ್ನು ತನ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುತ್ತದೆ.ಈ ಪಾತ್ರ ಯುವಕರಿಗೆ ಪ್ರೇರಣೆಯಾಗಲೊದೆ.ಆ ಪಾತ್ರವು ಪ್ರಕೃತಿಗಾಗಿ ಹೋರಾಟ ನಡೆಸಿದರೆ  ಸಮಾಜಕ್ಕೆ ನ್ಯಾಯವನ್ನುದೊರಕಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದು ನಮ್ಮ ಚಿತ್ರದ ತಿರುಳು" ಶಂಕರ್ ವಿವರಿಸುತ್ತಾರೆ.

ಬಾಕ್ಸಿಂಗ್ ದೃಶ್ಯಗಳನ್ನು ಸಂಯೋಜನೆ ಮಾಡಲು ಮುಂದಾದ ನಿರ್ದೇಶಕರು ಕಿಕ್ ಬಾಕ್ಸರ್ ಗಿರೀಶ್ ಗೌಡರ ಸಹಾಯ ಪಡೆದಿದ್ದಾರೆ.ಕ್ಯಾನ್ಸರ್ ನಿಂದ ಬದುಕುಳಿದ  ಕರ್ನಾಟಕದ ರಾಷ್ಟ್ರೀಯ ಚಾಂಪಿಯನ್ ಪ್ರಸ್ತುತ ಅಭಿಷೇಕ್ ಮತ್ತು ಚಿರಂಜೀವಿ ಸರ್ಜಾ ಸೇರಿದಂತೆ ಹಲವಾರು ಸ್ಯಾಂಡಲ್ ವುಡ್ ನಟರಿಗೆ ತರಬೇತಿ ನೀಡುತ್ತಿದ್ದಾರೆ.

“ನಾವು ಈ ವಿಷಯವನ್ನು ಪ್ರಜ್ವಲ್ ಗೆ ವಿವರಿಸಿದಾಗ ಅವರು ಗಿರೀಶ್ ಅವರ ಹೆಸರು ಸೂಚಿಸಿದ್ದಾರೆ.ದೃಶ್ಯಗಳಿಗೆ ನಾನು ಅವರಿಂದ ಸಲಹೆಗಳನ್ನು ತೆಗೆದುಕೊಂಡಿದ್ದೇನೆ, ಅದು ಪಾತ್ರಕ್ಕೆ ವಾಸ್ತವಿಕ ಸ್ಪರ್ಶವನ್ನು ನೀಡಿತು, ”ಶಂಕರ್ ಹೇಳಿದರು,“ ವಾಸ್ತವವಾಗಿ, ಅರ್ಜುನ್ ಗೌಡ ಚಿತ್ರದ ಕೆಲವು ದೃಶ್ಯಗಳಲ್ಲಿ ಗಿರೀಶ್ ಸ್ವತಃ ಕಾಣಿಸಿಕೊಳ್ಳುತ್ತಾರೆ" ಅವರು ವಿವರಿಸಿದ್ದಾರೆ.

ಇದಾಗಲೇ ಚಿತ್ರದ ಹಾಡುಗಳು ಸೇರಿ ಶೇ. 90 ಭಾಗದ ಚಿತ್ರೀಕರಣ ಮುಗಿದಿದೆ.ಇನ್ನುಳಿದ ಶೇ. 10 ಭಾಗವನ್ನು ವಿದೇಶದಲ್ಲಿ ಚಿತ್ರೀಕರಿಸಬೇಕಿದೆ.ಡೇಟ್ಸ್ ಗಳ ಸಂಯೋಜನೆಗಾಗಿ ನಿರ್ದೇಶಕರು ಪ್ರಜ್ವಲ್ ಅವರ ಸಮಯಕ್ಕೆ ಕಾಯುತ್ತಿದ್ದಾರೆ.ಸೆಪ್ಟೆಂಬರ್ ನಲ್ಲಿ ಚಿತ್ರತಂಡ ವಿದೇಶದಲ್ಲಿ ಶೂಟಿಂಗ್ ನಡೆಸಲಿದೆ ಎಂದು ನಿರ್ದೇಶಕ ಹೇಳಿದ್ದಾರೆ. ರಾಮು  ಫಿಲ್ಮ್ಸ್ ಅಡಿಯಲ್ಲಿ ತಯಾರಿಸಲಾಗಿರುವ ಅರ್ಜುನ್ ಗೌಡ ಅಕ್ಟೋಬರ್ ಬಿಡುಗಡೆ ಆಗುವ ನಿರೀಕ್ಷೆ ಇದೆ.ಇದರಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿಯಾಗಿದ್ದರೆ ಜೈ ಆನಂದ್ ಕ್ಯಾಮೆರಾ ವರ್ಕ್ ಅನ್ನು ನಿರ್ವಹಿಸುತ್ತಿದ್ದಾರೆ.

SCROLL FOR NEXT