ಸನಾ ತಮ್ಮಯ್ಯ 
ಸಿನಿಮಾ ಸುದ್ದಿ

ಒಡೆಯ ನಂತರ ಜೀವನದ ದೃಷ್ಟಿಕೋನ ಬದಲಾಗಿದೆ- ಸನಾ ತಿಮ್ಮಯ್ಯ 

ಜೀವನದ ಹೊಸ ಅಧ್ಯಾಯಕ್ಕೆ ಮುನ್ನಡಿಯಾಗಲಿರುವ ಒಡೆಯ ಚಿತ್ರದ ಬಿಡುಗಡೆಗೆ ಮಾಡೆಲ್ ಹಾಗೂ ನಟಿ ಸನಾ ತಮ್ಮಯ್ಯ ಕುತೂಹಲದಿಂದ ಕಾಯುತ್ತಿದ್ದಾರೆ.  

ಬೆಂಗಳೂರು: ಜೀವನದ ಹೊಸ ಅಧ್ಯಾಯಕ್ಕೆ ಮುನ್ನಡಿಯಾಗಲಿರುವ ಒಡೆಯ ಚಿತ್ರದ ಬಿಡುಗಡೆಗೆ ಮಾಡೆಲ್ ಹಾಗೂ ನಟಿ ಸನಾ ತಮ್ಮಯ್ಯ ಕುತೂಹಲದಿಂದ ಕಾಯುತ್ತಿದ್ದಾರೆ.  

ಡಿಸೆಂಬರ್ 12 ರಂದು ಚಿತ್ರ ಬಿಡುಗಡೆಯಾಗಲಿದ್ದು, ಪ್ರಸ್ತುತ ತಾನು ಅನುಭವಿಸುತ್ತಿರುವ ಭಾವನೆಗಳನ್ನು  ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಚಿತ್ರ ಬಿಡುಗಡೆಗೂ ಮುನ್ನವೇ ಇಂಡಸ್ಟ್ರೀ ಹಾಗೂ ಪ್ರೇಕ್ಷಕರಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಒಡೆಯ ನಂತರ ಪ್ರೇಕ್ಷಕರು ನನ್ನನ್ನು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ದರ್ಶನ್ ಜೊತೆಗೆ ಚೊಚ್ಚಲ ಚಿತ್ರದಲ್ಲಿ ನಟಿಸಿದ್ದು, ಅವರಿಂದ ಅನೇಕ ಪಾಠಗಳನ್ನು ಕಲಿತಿದ್ದೇನೆ. ಒಡೆಯ ಚಿತ್ರದಿಂದ ಸಿನಿಮಾ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದು, ನಿರ್ದೇಶಕ ಶ್ರೀಧರ್, ದರ್ಶನ್ ಹಾಗೂ ಇನ್ನಿತರ ಎಲ್ಲಾ ಕಲಾವಿದರಿಗೂ ಧನ್ಯವಾದಗಳು. ನನ್ನ ಭವಿಷ್ಯವನ್ನು ಹೇಗೆ ಮುಂದೆ ಕೊಂಡೊಯ್ಯಬಹುದು ಎಂಬುದಕ್ಕೆ ಈ ಸಿನಿಮಾ ಸಹಾಯವಾಗಲಿದೆ. ಒಡೆಯ ನಂತರ ಜೀವನದ ದೃಷ್ಟಿಕೋನ ಬದಲಾಗಿದೆ. ದರ್ಶನ್ ಅವರಿಗೆ ಕೆಲಸದ ಬಗ್ಗೆ ಎಲ್ಲಿಲ್ಲದ ಶ್ರದ್ದೆ ಇದೆ. ಅವರು ಸ್ಪೂರ್ತಿಯಾಗಿದ್ದಾರೆ.ಯಾವುದೇ ದೃಶ್ಯವನ್ನು ಅವರು ನಿರ್ಲಕ್ಷ್ಯಮಾಡಲ್ಲ. ಇವೆಲ್ಲವನ್ನು ತಿಳಿಯಲು ಒಡೆಯ ಸೆಟ್ ಸಹಾಯ ಮಾಡಿದ್ದಾಗಿ ಹೇಳಿದ್ದಾರೆ.

ಸಂದೇಶ್ ಪ್ರೊಢಕ್ಷನ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಹಿರಿಯ ಕಲಾವಿದ ದೇವರಾಜ್, ರವಿಶಂಕರ್, ಶರತ್ ಲೊಹಿತಾಶ್ವ ಮತ್ತಿತರರ ತಾರಾಬಳಗವಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT