ರಕ್ಷಿತ್ ಶೆಟ್ಟಿ-ಶಾನ್ವಿ ಶ್ರೀವಾತ್ಸವ್ 
ಸಿನಿಮಾ ಸುದ್ದಿ

ನಟಿ ಶಾನ್ವಿ ಶ್ರೀವಾತ್ಸವ್ ಜೊತೆ ಲವ್, ಎಂಗೇಜ್ಮೆಂಟ್ ಗಾಸಿಪ್; ಇದಕ್ಕೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?

ಕನ್ನಡದ ಕಿರಿಕ್ ಪಾರ್ಟಿಯಲ್ಲಿ ನಟಿಸಿ, ಜನಪ್ರಿಯತೆ ಗಳಿಸಿದ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕೈಕೊಟ್ಟು ಪರಭಾಷೆಗಳಲ್ಲಿ ಬ್ಯುಸಿಯಾಗಿರುವ ವಿಷಯ ಹಳೆಯದಾಯಿತು. ಈಗ ಹೊಸದಾಗಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಕೈ ಕೊಟ್ಟ ರಶ್ಮಿಕಾಗೆ ಮುಟ್ಟಿ ನೋಡಿಕೊಳ್ಳುವ...

ಬೆಂಗಳೂರು: ಕನ್ನಡದ ಕಿರಿಕ್ ಪಾರ್ಟಿಯಲ್ಲಿ ನಟಿಸಿ, ಜನಪ್ರಿಯತೆ ಗಳಿಸಿದ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿಗೆ ಕೈಕೊಟ್ಟು ಪರಭಾಷೆಗಳಲ್ಲಿ ಬ್ಯುಸಿಯಾಗಿರುವ ವಿಷಯ ಹಳೆಯದಾಯಿತು. ಈಗ ಹೊಸದಾಗಿ ಹರಿದಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ, ಕೈ ಕೊಟ್ಟ ರಶ್ಮಿಕಾಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಕೊಟ್ಟ ರಕ್ಷಿತ್ ಶೆಟ್ಟಿಗೆ ಮತ್ತೊಬ್ಬ ಸ್ಟಾರ್ ನಟಿ ಜೊತೆ ಮದುವೆಯಾಗಲಿದೆ ಎಂಬ ಗುಲ್ಲು ಹಬ್ಬಿದೆ.

ರಕ್ಷಿತ್ ಶೆಟ್ಟಿ ಅವರ ಚಿತ್ರ ಶ್ರೀಮನ್ ನಾರಾಯಣ ಇದೇ ಡಿಸೆಂಬರ್ ೨೦ರಂದು ರಿಲೀಸ್ ಆಗುತ್ತಿದೆ ಇದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಮತ್ತು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರು ಈ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಈ ಸಿನಿಮಾದ ಟ್ರೈಲರ್ ತುಂಬಾ ಚೆನ್ನಾಗಿದೆ ಈ ಹಿಂದೆ ರಕ್ಷಿತ್ ಶೆಟ್ಟಿ ಅವರಿಗೆ ರಶ್ಮಿಕಾ ಜೊತೆ ಎಂಗೇಜ್ಮೆಂಟ್ ಆಯಿತು ಆದರೆ ಕಾರಣಾಂತರಗಳಿಂದ ಎಂಗೇಜ್ಮೆಂಟ್ ಮುರಿದು ಹೋಯಿತು. ಈಗ ಕೇಳಿಬರುತ್ತಿರುವ ಸುದ್ದಿ ಏನಪ್ಪಾ ಅಂದರೆ ರಕ್ಷಿತ್ ಶೆಟ್ಟಿ ಅವರು ಇನ್ನೊಬ್ಬ ನಾಯಕಿಯನ್ನು ಲವ್ ಮಾಡುತ್ತಿದ್ದಾರೆ ಮತ್ತು ಅವರನ್ನು ಮದುವೆಯಾಗುತ್ತಿದ್ದಾರೆ ಎಂಬುದು. 

ಹಾಗಾದರೆ ಆ ನಾಯಕಿ ಯಾರು ಗೊತ್ತಾ ಅವರು ಬೇರೆ ಯಾರೂ ಅಲ್ಲ ಶ್ರೀಮನ್ ನಾರಾಯಣ ಚಿತ್ರನಟಿ ಶಾನ್ವಿ ಶ್ರೀವಾತ್ಸವ್. ಇವರ ಜೊತೆ ರಕ್ಷಿತ್ ಶೆಟ್ಟಿ ಮದುವೆ ಆಗಲಿದ್ದಾರೆ ಎಂದು ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೇಗ ಮದುವೆಯಾಗಿ ಎಂಗೇಜ್ಮೆಂಟ್ ಬೇಡ ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು!

ಈ ಗಾಸಿಬ್ ವೈರಲ್ ಆಗುತ್ತಿದ್ದಂತೆ ಅಭಿಮಾನಿಯೊಬ್ಬರು ಬೇಗ ಮದುವೆ ಮಾಡಿಕೊಳ್ಳಿ ಸರ್ ಎಂದು ಹೇಳಿದ್ದು ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತ್ ಶೆಟ್ಟಿ ಇಂತಹ ವಿಚಾರಗಳನ್ನು ಸುಮ್ಮನೆ ನಿರ್ಲಕ್ಷಿಸಿ ಮುಂದೆ ಸಾಗಿ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!