ತಾಯಿ ಲೀಲಾವತಿ ಜೊತೆ ವಿನೋದ್ ರಾಜ್ 
ಸಿನಿಮಾ ಸುದ್ದಿ

ನಟ ವಿನೋದ್ ರಾಜ್  ಸಿನಿಮಾಗಳಿಂದ ದೂರ ಉಳಿಯಲು ಕಾರಣವೇನು ಗೊತ್ತೆ?

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ವಿನೋದ್‍ರಾಜ್‍ ದ್ವಾರಕೀಶ್‍ ಮೂಲಕ ‘ಡಾನ್ಸ್ ರಾಜ ಡಾನ್ಸ್’ ಚಿತ್ರದಿಂದ ಕನ್ನಡಿಗರ ಮನೆಮಗ ಎನಿಸಿದ ನಟ ನಾನಾ ಕಾರಣಗಳಿಗಾಗಿ ಹಲವು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರವಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ವಿನೋದ್‍ರಾಜ್‍ ದ್ವಾರಕೀಶ್‍ ಮೂಲಕ ‘ಡಾನ್ಸ್ ರಾಜ ಡಾನ್ಸ್’ ಚಿತ್ರದಿಂದ ಕನ್ನಡಿಗರ ಮನೆಮಗ ಎನಿಸಿದ ನಟ ನಾನಾ ಕಾರಣಗಳಿಗಾಗಿ ಹಲವು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರವಿದ್ದಾರೆ.

ಏತನ್ಮಧ್ಯೆ, 'ಮುಖವಾಡ' ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ರನ್ನು ಕರೆತರುವ ತಯಾರಿ ನಡೆಸಿರುವ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿರುವ ವಿನೋದ್  ರಾಜ್ ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಗೆ ಕೊಟ್ಟಿಲ್ಲ ಹಾಗೂ ಸದ್ಯಕ್ಕೆ ಒಪ್ಪಿಗೆ ಕೊಡುವುದೂ ಇಲ್ಲ ಎಂದು ಹೇಳಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ, ವಿನೋದ್‍ರಾಜ್‍ ಹಿರಿಯ ನಟಿ ಲೀಲಾವತಿಯವರ ಮುದ್ದಿನ ಮಗ “ಅಮ್ಮ ಆರೋಗ್ಯವಾಗಿದ್ದಾರೆ ಆದಾಗ್ಯೂ ವಯೋಸಹಜವಾಗಿ ಕಾಣಿಸಿಕೊಳ್ಳುವ ತೊಂದರೆಯ ಬಗ್ಗೆ ಗಮನ ನೀಡಲೇಬೇಕು, ನನಗೆ ಅಮ್ಮ ಮುಖ್ಯ ಹೀಗಾಗಿ ಯಾವುದೇ ಚಿತ್ರಕ್ಕೆ ಒಪ್ಪಿಲ್ಲ ಎಂದು ಹೇಳಿದ್ದಾರೆ.

ಎಸ್ ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮುಖವಾಡ’ ಚಿತ್ರದಲ್ಲಿ ಪವನ್‍ ತೇಜ, ಶಿಲ್ಪಾ ಮಂಜುನಾಥ್ ಜತೆಗೆ ವಿನೋದ್ ರಾಜ್ ಒಪ್ಪಿದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ