ಸಿನಿಮಾ ಸುದ್ದಿ

ದಕ್ಷಿಣ ಭಾರತ ಫಿಲ್ಮ್ ಫೇರ್ ಪ್ರಶಸ್ತಿ: ಕೆಜಿಎಫ್ ಅತ್ಯುತ್ತಮ ಚಿತ್ರ, ನಾತಿಚರಾಮಿಗೆ ನಾಲ್ಕು ಪ್ರಶಸ್ತಿ ಗರಿ

Raghavendra Adiga

ಯಶ್ ಅತ್ಯುತ್ತಮ ನಟ, ಮಾನ್ವಿತಾ ಅತ್ಯುತ್ತಮ ನಟಿ

ರಶ್ಮಿಕಾಗೆ ಸಿಕ್ತು ತೆಲುಗು ಚಿತ್ರಕ್ಕೆ ಅವಾರ್ಡ್

ದಕ್ಷಿಣ ಭಾರತೀಯ ಚಿತ್ರಗಳಿಗೆ ನೀಡಲಾಗುವ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆಯಾಗಿದ್ದು ರಾಕಿ ಬಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಅಲ್ಲದೆ ಇದೇ ಚಿತ್ರದ ಅಭಿನಯಕ್ಕೆ ಯಶ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದರೆ "ಟಗರು" ನಾಯಕಿ ಮಾನ್ವಿತಾ ಹರೀಶ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದಾರೆ.

ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದ ಕನ್ನಡ ಚಿತ್ರ,ಗಳ ವಿವರ ಹೀಗಿದೆ-
ಅತ್ಯುತ್ತಮ ಚಲನಚಿತ್ರ  ಕೆಜಿಎಫ್ ಚಾಪ್ಟರ್ 1
ಅತ್ಯುತ್ತಮ ನಿರ್ದೇಶಕ ಮನ್ಸೂರ್ (ನಾತಿಚರಾಮಿ)
ಅತ್ಯುತ್ತಮ ನಟ ಯಶ್ (ಕೆಜಿಎಫ್)
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ ಸತೀಶ್ ನಿನಾಸಂ (ಅಯೋಗ್ಯ)
ತ್ಯುತ್ತಮ ನಟಿ ಮಾನ್ವಿತಾ ಹರೀಶ್ (ಟಗರು)
ವಿಮರ್ಶಕರ ಅತ್ಯುತ್ತಮ ನಟಿ ಶ್ರುತಿ ಹರಿಹರನ್ (ನಾತಿಚರಾಮಿ)
ಅತ್ಯುತ್ತಮ ಪೋಷಕ ನಟ ಧನಂಜಯ್ (ಟಗರು)
ಅತ್ಯುತ್ತಮ ಪೋಷಕ ನಟಿ ಶರಣ್ಯ (ನಾತಿಚರಾಮಿ)
ಅತ್ಯುತ್ತಮ ಹಿಉನ್ನೆಲೆ ಗಾಯಕ ಸಂಜಿತ್ ಹೆಗ್ಡೆ (ನಡುವೆ ಅಂತರವಿರಲಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ ಬಿಂದುಮಾಲಿನಿ (ನಾತಿಚರಾಮಿ)
ಅತ್ಯುತ್ತಮ ಸಾಹಿತ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿ (ಹಸಿರು ರಿಬ್ಬನ್)
ಅತ್ಯುತ್ತಮ ಸಂಗೀತ ಆಲ್ಬಮ್ ವಾಸುಕಿ ವೈಭವ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ)

ಕೊಡಗಿನ ತಾರೆ ಕಿರಿಕ್ ಪಾರ್ಟ್ ಖ್ಯಾತಿಯ ರಶ್ಮಿಕಾ ಮಂದಣ್ಣ ತೆಲುಗಿನ "ಗೀತ ಗೋವಿಂದಂ" ಚಿತ್ರಕ್ಕಾಗಿ ವಿಮರ್ಶಕರ ಮೆಚ್ಚಿನ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚೆನ್ನೈನಲ್ಲಿ ಶನಿವಾರ (ಡಿಸೆಂಬರ್ ೨೧)ರಂದು ನಡೆದ "೬೬ನೇ ಯಮಹಾ ಪ್ಯಾಸಿನೋ ಫಿಲ್ಮ್ ಫೇರ್ ಅವಾರ್ಡ್ ಸೌತ್ ೨೦೧೯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ನಟಿಯರು, ನಿರ್ದೇಶಕರು ಸೇರಿ ಕೆಲವು ಬಾಲಿವುಡ್ ತಾರೆಯರೂ ಭಾಗವಹಿಸಿದ್ದರು.

SCROLL FOR NEXT