ಸಿನಿಮಾ ಸುದ್ದಿ

ಮೈಸೂರು ಅರಮನೆಯ ವೈಭವ ಸೆರೆಹಿಡಿದ 'ಮೈಸೂರು ಡೈರೀಸ್'

Sumana Upadhyaya

ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಗೀತರಚನೆಕಾರ, ಚಿತ್ರಕಥೆಗಾರ ಮತ್ತು ನಟ ಧನಂಜಯ್ ರಂಜನ್ ಮೈಸೂರು ಡೈರೀಸ್ ಮೂಲಕ ನಿರ್ದೇಶಕರಾಗಿದ್ದಾರೆ. 


ಪ್ರಭು ಮುಂಡುಕೂರು ಮತ್ತು ಪವನ್ ಗೌಡ ಮುಖ್ಯ ಪಾತ್ರದಲ್ಲಿರುವ ಮೈಸೂರು ಡೈರೀಸ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇಂದು ಚಿತ್ರದ ಮೊದಲ ಸಾಹಿತ್ಯದ ವಿಡಿಯೊ ಬಿಡುಗಡೆಯಾಗಲಿದೆ. 


ಹೆಸರೇ ಹೇಳುವಂತೆ ಚಿತ್ರವಿಡೀ ಮೈಸೂರಿನಲ್ಲಿ ಚಿತ್ರೀಕರಣಗೊಂಡಿದ್ದು ದೂರದಿಂದ ಸುರಸುಂದರಾಂಗ ಬಂದ ಎಂಬ ಚರಣ್ ರಾಜ್ ಸಂಗೀತದ ಹಾಡು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ. ಸುಚಿತ್ ಸುರೇಶನ್ ಮತ್ತು ಧನಿಶ್ ಜಗದೀಶ್ ಟ್ರ್ಯಾಕ್ ಗೀತೆಯನ್ನು ಹಾಡಿದ್ದು ಧನು ಮಾಸ್ಟರ್ ಅವರ ಕೊರಿಯೊಗ್ರಫಿಯಿದೆ.


ಗೆಳೆತನದ ಬಗ್ಗೆ ಇರುವ ಚಿತ್ರದಲ್ಲಿ ಮೈಸೂರಿನ ಅರಮನೆಯನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಸಿಕೆ ಡೈನ್ ಕ್ರಿಯೇಷನ್ಸ್ ಮತ್ತು ಸಮರಥ್ ಎಂಟರ್ಟೈನರ್ಸ್ ನಡಿ ಸುನಂದ ಕೃಷ್ಣಪ್ಪ ಮತ್ತು ದೀಪಕ್ ಕೃಷ್ಣ ಜಂಟಿಯಾಗಿ ನಿರ್ಮಿಸುತ್ತಿರುವ ಮೈಸೂರು ಡೈರಿಸ್ ನಲ್ಲಿ ಧನಂಜಯ್ ನಿರ್ದೇಶನ ಮಾತ್ರವಲ್ಲದೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಕ್ಯಾಮರಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಶಕ್ತಿ ಶೇಖರ್ ಅವರ ಛಾಯಾಗ್ರಹಣವಿದೆ.

SCROLL FOR NEXT