ಅನಿತಾ ಭಟ್, ಸಂಹಿತಾ ವಿನ್ಯಾ 
ಸಿನಿಮಾ ಸುದ್ದಿ

2019 ಹಿನ್ನೋಟ: ಸ್ಯಾಂಡಲ್ ವುಡ್  ತಾರೆಯರು ಏನಂತಾರೆ?

2019ರಲ್ಲಿ ಅನೇಕ ನಟಿಯರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಕೆಲವರು ತಮ್ಮ ಪ್ರಯತ್ನದಲ್ಲಿ ಸಕ್ಸಸ್ ಕಂಡಿದ್ದರೆ ಮತ್ತೆ ಕೆಲವರು ಸಕ್ಸಸ್ ಹಾದಿಯಲ್ಲಿ ನಿರಂತರ ಪ್ರಯತ್ನ ಮುಂದುವರೆಸಿದ್ದಾರೆ.

2019ರಲ್ಲಿ ಅನೇಕ ನಟಿಯರು ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಕೆಲವರು ತಮ್ಮ ಪ್ರಯತ್ನದಲ್ಲಿ ಸಕ್ಸಸ್ ಕಂಡಿದ್ದರೆ ಮತ್ತೆ ಕೆಲವರು ಸಕ್ಸಸ್ ಹಾದಿಯಲ್ಲಿ ನಿರಂತರ ಪ್ರಯತ್ನ ಮುಂದುವರೆಸಿದ್ದಾರೆ. ಇಂತವರಲ್ಲಿ ಸಂಹಿತಾ ವಿನ್ಯಾ ಹಾಗೂ ಅನಿತ್ ಭಟ್ ಕೂಡಾ ಒಬ್ಬರಾಗಿದ್ದಾರೆ. ಇವರು ಅಭಿನಯಿಸಿರುವ ಕೆಲವೊಂದು ಚಿತ್ರಗಳು ಈ ವರ್ಷ ತೆರೆ ಕಂಡಿದ್ದರೆ, 2020 ರಲ್ಲಿ ಮತ್ತೊಂದಿಷ್ಟು ಚಿತ್ರಗಳು ತೆರೆ ಕಾಣಲಿವೆ. ತಮ್ಮ ಕಲಾ ಬದುಕು ಕುರಿತಂತೆ ತಮ್ಮ  ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸಂಹಿತಾ ವಿನ್ಯಾ ( ಸ್ಯಾಂಡಲ್ ವುಡ್ ನಟಿ ಹಾಗೂ ಮಾಡೆಲಿಂಗ್ ) 

2019 ವರ್ಷ ಸ್ವಲ್ಪ ಸಿಹಿಯಾಗಿದ್ದರೆ, ಮತ್ತೆ ಸ್ವಲ್ಪ ನಿರಾಸೆ ಉಂಟುಮಾಡಿದೆ. ಜಗ್ಗೇಶ್ ಪುತ್ರ ಗುರುರಾಜ್ ಜಗ್ಗೇಶ್ ಜೊತೆ ಅಭಿನಯಿಸಿದ ವಿಷ್ಣು ಸರ್ಕಲ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿನ ಪಾತ್ರ ತುಂಬಾನೇ ಖುಷಿ ನೀಡಿದೆ.  ಮುಂದೆ ಕೂಡಾ ಈ ತರಹದ ಪಾತ್ರ ಮಾಡುವ ಆಸೆ.  ಹಾಲುತುಪ್ಪ, ಅಮೃತ ಘಳಿಗೆ ಬಿಡುಗಡೆಯಾಗಿದ್ದರೆ,  'ಸೀತಮ್ಮ ಬಂದಳು ಸಿರಿ ಮಲ್ಲಿಗೆ ತೊಟ್ಟು ಚಿತ್ರ ರಿಲೀಸ್ ಆಗಬೇಕಾಗಿದೆ. ಸಿಂಪಲ್ಲಾಗಿ ಮತ್ತೊಂದು ಲವ್ ಸ್ಟೋರಿ ಶೂಟಿಂಗ್ ನಡೆಯುತ್ತಿದೆ ಅಂತಾರೆ ಸಂಹಿತಾ.

ಚಿತ್ರಗಳ ಶೂಟಿಂಗ್ ಜೊತೆಯಲ್ಲಿ ನಿರಂತರವಾಗಿ ಪ್ಯಾಶನ್ ಶೋ ನಲ್ಲಿ ತೊಡಗಿಸಿಕೊಂಡಿರುವ ಸಂಹಿತಾ ವಿನ್ಯಾ, 2020 ರಲ್ಲಿ ಮತ್ತಷ್ಟು ಸಾಧಿಸಬೇಕೆಂಬ ಉತ್ಸಾಹದಲ್ಲಿದ್ದಾರೆ.

ಅನಿತಾ ಭಟ್  ಚಲನಚಿತ್ರ ನಟಿ 

2019  ವರ್ಕಿಂಗ್ ಇಯರ್ ಅಂತಾ ಹೇಳಲು ಇಷ್ಟಪಡುತ್ತೇನೆ. 2019ರಲ್ಲಿ ನಾಲ್ಕು ಸಿನಿಮಾಗಳು ಪೂರ್ಣಗೊಂಡಿವೆ. ಸದ್ಗಣ ಸಂಪನ್ನ ಮಾಧವ, ಕನ್ನೇರಿ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಲಿವೀರ, ಬೆಂಗಳೂರು 69 ಜೂನ್ ತಿಂಗಳಲ್ಲಿ ಬಿಡುಗಡೆಯ ನಿರೀಕ್ಷೆ ಹೊಂದಿದ್ದೇನೆ. ಎರಡು ಚಿತ್ರಗಳಲ್ಲಿ ಅಭಿನಯದ ಬಗ್ಗೆ ಮಾತುಕತೆ ನಡೆಯುತ್ತಿದೆ. ಇನ್ನು ಒಪ್ಪಂದವಾಗಿಲ್ಲ. ಸಿನಿಮಾ ಜೊತೆಗೆ ವ್ಯವಹಾರವು ಸುಗಮವಾಗಿ ಸಾಗುತ್ತಿದೆ ಎನ್ನುತ್ತಾರೆ ಅನಿತಾ ಭಟ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾ ತತ್ತರ: ನೆರವು ನೀಡುವ ವಿಮಾನಗಳಿಗೆ ಅನುಮತಿ ವಿಳಂಬ, ಪಾಕ್ ಆರೋಪದ ವಿರುದ್ಧ ಭಾರತ ತೀವ್ರ ಕಿಡಿ

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

ದರ್ಶನ್ ಲಾಕಪ್ ಡೆತ್: ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿ 4 ಮಂದಿ ಅಮಾನತು!

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಬಹಿರಂಗ ಎಚ್ಚರಿಕೆ

SCROLL FOR NEXT