ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ, ಸದ್ಯ ಎಂ.ಡಿ ಶ್ರೀಧರ್ ನಿರ್ದೇಶನದ ಒಡೆಯ ಸಿನಿಮಾ ಶೂಟಿಂಗ್ ಇದಿನಿಂದ ಆರಂಭವಾಗಿದೆ,
ಒಡೆಯ ಸಿನಿಮಾವನ್ನು ಸಂದೇಶ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ, ಎರಡು ಶೇಡ್ ಗಳಲ್ಲಿ ದರ್ಶನ್ ನಟಿಸಲಿದ್ದಾರೆ, ಗಡ್ಡ ಬಿಟ್ಟ ಗೆಟಪ್ ನಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ.
ಬೆಂಗಳೂರಿನಲ್ಲಿ ನಡೆಯುವ ಶೂಟಿಂಗ್ ನಲ್ಲಿ ಶರತ್ ಲೋಹಿತಾಶ್ವ ಭಾಗವಹಿಸಲಿದ್ದಾರೆ, ರಾಘವಿ ತಿಮ್ಮಯ್ಯ ನಾಯಕಿಯಾಗಿ ನಟಿಸಿದ್ದಾರೆ. ಯಶಸ್, ಪಂಕಜ್, ನಿರಂಜನ್ ಮತ್ತು ಸಮರ್ಥ್ ದರ್ಶನ್ ಸಹೋದರರಾಗಿ ನಟಿಸಲಿದ್ದಾರೆ, ಒಡೆಯ ಸಿನಿಮಾಗಾಗಿ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ, ದೇವರಾಜ್ ಮತ್ತು ಚಿಕ್ಕಣ್ಣ ಕೂಡ ಅಭಿನಯಿಸಿದ್ದಾರೆ.