ಯಜಮಾನ ಚಿತ್ರದ ಟ್ರೈಲರ್ 
ಸಿನಿಮಾ ಸುದ್ದಿ

'ಆನೆ ನಡೆದಿದ್ದೇ ದಾರಿ.. ತಾಕತ್ತಿದ್ದರೆ ಕಟ್ಹಾಕು'; ಯಜಮಾನ ಚಿತ್ರದ ಜಬರ್ದಸ್ತ್ ಟ್ರೈಲರ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಯಜಮಾನ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 2 ಗಂಟೆಗಳ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಯಜಮಾನ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೇವಲ 2 ಗಂಟೆಗಳ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಟ್ರೈಲರ್ ನಲ್ಲಿ ದರ್ಶನ್​ ಖಡಕ್ ಡೈಲಾಗ್, ಆಕ್ಷನ್​ ಮೂಲಕ ಅಬ್ಬರಿಸಿದ್ದು, ಟ್ರೈಲರ್ ನಲ್ಲಿನ ಪಂಚಿಂಗ್ ಡೈಲಾಗ್ ಗಳು ದರ್ಶನ್ ಅಭಿಮಾನಿಗಳ ಮನ ಸೆಳೆಯುತ್ತದೆ. 'ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿಂದ ಕಟ್ಟಿರೊ ಸ್ವಂತ ಬ್ರಾಂಡೊ... 'ಆನೆ ನಡೆದಿದ್ದೇ ದಾರಿ ತಾಕತ್ತಿದ್ದರೆ ಕಟ್ಟಾಕು' ಎಂಬ ಡೈಲಾಗ್ ಗಳು ಈಗಾಗಲೇ ವೈರಲ್ ಆಗಿವೆ. 
ಇನ್ನು ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ಇದು ದರ್ಶನ್ ಮತ್ತು ಹರಿಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಬರುತ್ತಿರುವ 25ನೇ ಸಿನಿಮಾ ಇದಾಗಿದೆ ಎಂಬುದು 'ಯಜಮಾನ' ಚಿತ್ರದ ಮತ್ತೊಂದು ವಿಶೇಷ. ಇನ್ನು ದರ್ಶನ್ ಗೆ ಜೋಡಿಯಾಗಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಡಾಲಿ ಖ್ಯಾತಿಯ ಧನಂಜಯ್ ಮತ್ತು ಬಾಲಿವುಡ್ ನಟ ಅನೂಪ್ ಸಿಂಗ್ ಹಾಗೂ ಆರ್ಮುಗಂ ಖ್ಯಾತಿಯ ಆರ್ಮುಗಂ ರವಿಶಂಕರ್ ಖಳನಟರಾಗಿ ಅಭಿನಯಿಸಿದ್ದಾರೆ. 
ಪ್ರಮುಖ ಪಾತ್ರದಲ್ಲಿ ಸಾಧುಕೋಕಿಲ, ಹಿರಿಯ ನಟ ದತ್ತಾತ್ರೆಯ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ಕಾಣಿಸಿಕೊಂಡಿದ್ದು,  'ವಿಷ್ಣುವರ್ಧನ' ಖ್ಯಾತಿಯ ನಿರ್ದೇಶಕ ಪಿ.ಕುಮಾರ್ 'ಯಜಮಾನ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಶೈಲಜಾ ನಾಗ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ