ಭೈರಾದೇವಿ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನೋಟ 
ಸಿನಿಮಾ ಸುದ್ದಿ

'ಭೈರಾದೇವಿ' ಶೂಟಿಂಗ್ ವೇಳೆ ಬಿದ್ದು ರಾಧಿಕಾ ಕುಮಾರಸ್ವಾಮಿಗೆ ಗಾಯ

ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ಮುಂದಿನ ಚಿತ್ರ ಭೈರಾದೇವಿ' ಶೂಟಿಂಗ್ ...

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ಮುಂದಿನ ಚಿತ್ರ ಭೈರಾದೇವಿ' ಶೂಟಿಂಗ್ ವೇಳೆ ಬಿದ್ದು ಏಟು ಮಾಡಿಕೊಂಡಿದ್ದಾರೆ.

'ಭೈರಾದೇವಿ' ಚಿತ್ರದಲ್ಲಿ ರಾಧಿಕಾ 'ಅಘೋರಿ' ಪಾತ್ರ ಮಾಡುತ್ತಿದ್ದು ಗೋರಿ ಮೇಲಿಂದ ಕೆಳಗಿಳಿಯುವಾಗ ಆಯತಪ್ಪಿ ಬಿದ್ದು ಕೆಳಗುರುಳಿ ಬೆನ್ನಿನ ಹುರಿಗೆ ಏಟಾಗಿದೆ. ವೈದ್ಯರು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಶಾಂತಿನಗರದ ಬಳಿ ಭೈರಾದೇವಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನಾಯಕಿ ಪಾತ್ರಧಾರಿ ರಾಧಿಕಾ ಕುಮಾರಸ್ವಾಮಿ ಅಘೋರಿ ಪಾತ್ರದಲ್ಲಿ ನಟಿಸುತ್ತಿದ್ದ ವೇಳೆ ಗೋರಿಯ ಮೇಲೆ ಹತ್ತಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಕೆಳಗಿಳಿಯುವಾಗ ರಾಧಿಕಾ ಆಯತಪ್ಪಿ ಕೆಳಗೆ ಬಿದ್ದರು. ತಕ್ಷಣವೇ ಅವರಿಗೆ ವೈದ್ಯಕೀಯ ಉಪಚಾರ ನಡೆಸಲಾಗಿದೆ. ಅವರನ್ನು ಪರೀಕ್ಷಿಸಿ ವೈದ್ಯರು ಬೆನ್ನಿನ ಹುರಿ ಭಾಗಕ್ಕೆ ಪೆಟ್ಟುಬಿದ್ದಿದ್ದು ಒಂದು ತಿಂಗಳು ವಿಶ್ರಾಂತಿ ಬೇಕು ಎಂದಿದ್ದಾರೆ ಎಂದು ಭೈರಾದೇವಿ ಚಿತ್ರತಂಡ ಹೇಳಿದೆ.

ಭೈರಾದೇವಿ ಒಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ಸ್ವತಃ ರಾಧಿಕಾ ಅವರೇ ತಮ್ಮ ಶಮಿಕಾ ಎಂಟರ್ ಪ್ರೈಸಸ್ ಅಡಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಖಳನಟ ರವಿಶಂಕರ್ ಹಾಗೂ ನಟ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲು 'ಆರ್‌ಎಕ್ಸ್‌ ಸೂರಿ ' ಚಿತ್ರ ನಿರ್ದೇಶಿಸಿದ್ದ ಶ್ರೀಜಯ್ ಭೈರಾದೇವಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

'ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯನಾಗಿರುತ್ತೇನೆ': ಸಿದ್ದರಾಮಯ್ಯ

ರಾಜ್ಯದ ಮುಂದಿನ CM ಆಗಲು ಕಾಂಗ್ರೆಸ್ ಟ್ರಬಲ್ ಶೂಟರ್ ರೆಡಿ: ಯಾರಿದು ಡಿಕೆ ಶಿವಕುಮಾರ್? ರಾಜಕೀಯವಾಗಿ ಬೆಳೆದುಬಂದದ್ದು ಹೇಗೆ?

SCROLL FOR NEXT