ಕುರುಕ್ಷೇತ್ರ 
ಸಿನಿಮಾ ಸುದ್ದಿ

'ದೇವರು ಎಲ್ಲಿಯವರೆಗೂ ನನಗೆ ಶಕ್ತಿ ಕೊಡುತ್ತಾರೋ, ಅಲ್ಲಿಯವರೆಗೂ ನಾನು ಜನರಿಗೆ ಸಹಾಯ ಮಾಡುತ್ತೇನೆ'

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ನನ್ನ 50ನೇ ಸಿನಿಮಾ, ಅದಾದ ನಂತರ ಆರಂಭವಾದ ಯಜಮಾನ 51ನೇ ಚಿತ್ರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ...

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ನನ್ನ 50ನೇ ಸಿನಿಮಾ, ಅದಾದ ನಂತರ ಆರಂಭವಾದ ಯಜಮಾನ 51ನೇ ಚಿತ್ರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ, ಹುಟ್ಟುಹಬ್ಬ ಪ್ರಯುಕ್ತ  ಮಾತನಾಡಿದ ದರ್ಶನ್, ಯಜಮಾನ ಸಿನಿಮಾ ಶೂಟಿಂಗ್ ಮುಗಿದಿದ್ದು ಬಿಡುಗಡೆಗೆ ಸಿದ್ಧವಿದೆ, 
ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರ ಸಿನಿಮಾಗೆ ಹೆಚ್ಚಿನ ಸಮಯ ಹಿಡಿಯಿತು, ಗ್ರಾಫಿಕ್ಸ್ ವರ್ಕ್ ಗಾಗಿ ನಿರ್ಮಾಪಕರು ಹೆಚ್ಚಿನ ಹಣ ವ್ಯಯಿಸಬೇಕಾಯಿತು.  ಹೀಗಾಗಿ ದೀರ್ಘಾವದಿ ಸಮಯ ಹಿಡಿಯಿತು, ಇದು ಒಂದೂವರೆ ವರ್ಷ ಸಮಯ ಹಿಡಿಯಿತು,ನನ್ನ ಯಾವುದೇ ಸಿನಿಮಾ ರಿಲೀಸ್ ಆಗಲು ತಯಾರಿಲ್ಲ, ಎಷ್ಟು ಮಂದಿ ಅಭಿಮಾನಿಗಳು ಇದರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಬಗ್ಗೆ ತಿಳಿದಿದೆ.
ಸಿನಿಮಾಗಳ ಸಂಖ್ಯೆ ಎಷ್ಟು ಎಂಬುದು ಮುಖ್ಯವಲ್ಲ, ಯಜಮಾನ ಟ್ರೈಲರ್ ಈ ಮಟ್ಟಿಗೆ ಹಿಟ್ ಆಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ, ಭಾರತಾದಾದ್ಯಂತ ಟ್ರೆಂಡ್ ಸೃಷ್ಟಿಸಿದೆ, ಅದಕ್ಕೆ ನಾನು ಆಬಾರಿಯಾಗಿದ್ದೇನೆ,ಪ್ರೇಕ್ಷಕರಿಗೆ ಏನು ಬೇಕೆಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ, ಸಿನಿಮಾವನ್ನು ವಿ. ಹರಿಕೃಷ್ಣ ನಿರ್ದೇಶಿಸಿದ್ದಾರೆ, ಮಾರ್ಚ್ 1 ರಂದುಸ ಸಿನಿಮಾ ರಿಲೀಸ್ ಆಗಲಿದೆ.
ಈ ವರ್ಷ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ತಮ್ಮ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. ಸಾವಿರಾರು ಅಭಿಮಾನಿಗಳು ಮನೆಗೆ ಬಂದು ಹುಟ್ಟುಹಬ್ಬದ ಶುಭಾಶಯ ಹೇಳಿದರು, ತಮ್ಮ ಹುಟ್ಟುಹಬ್ಬಕ್ಕಾಗಿ ಕೇಕ್ ಗಾಗಿ ಹಾಗೂ ಹೂವಿನ ಹಾರಗಳಿಗಾಗಿ ಹಣ ಖರ್ಚು ಮಾಡಬಾರದೆಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಹೂವಿನ ಹಾರ ಮತ್ತು ಹಾರಗಳಿಗಾಗಿ ಖರ್ಚು ಮಾಡುವ ಹಣವನ್ನು ಅನಾಥರಿಗೆ ಮತ್ತು ವೃದ್ಧಾಶ್ರಮಕ್ಕೆ ಊಟ ಹಾಕಲು ಬಳಸಿದ್ದಾರೆ, ನನ್ನಿಂದ ಎಷ್ಟು ಸಾಧ್ಯವೋ, ಎಷ್ಟು ದಿನ ನನ್ನಿಂದ  ಸಹಾಯ ಮಾಡಲು ಸಾಧ್ಯವೋ ಅಷ್ಟು ದಿನ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!