ಉಪೇಂದ್ರ, ಅನಂತ್ ನಾಗ್ 
ಸಿನಿಮಾ ಸುದ್ದಿ

ಉಗ್ರರನ್ನು ಮಟ್ಟ ಹಾಕೋಕೆ ಸೈನಿಕರು ಹೀಗೆ ಮಾಡಲಿ ಎಂದ ಉಪೇಂದ್ರ!

ರಿಯಲ್ ಸ್ಟಾರ್ ಖ್ಯಾತಿಯ ನಟ, ಉತ್ತಮ ಪ್ರಜಾಕೀಯ ಪಾರ್ಟಿ ಸಂಸ್ಥಾಪಕ ಉಪೇಂದ್ರ, ಹಿರಿಯ ನಟ ಅನಂತ್ ನಾಗ್ ಪುಲ್ವಾಮಾದಲ್ಲಿನ ಸಿಆರ್ ಪಿಎಫ್ ಸೈನಿಕರ ಮೇಲಿನ ಉಗ್ರ ದಾಳಿಯನ್ನು ಖಂಡಿಸಿದ್ದಾರೆ.

ಬೆಂಗಳೂರು: ರಿಯಲ್ ಸ್ಟಾರ್ ಖ್ಯಾತಿಯ ನಟ, ಉತ್ತಮ ಪ್ರಜಾಕೀಯ ಪಾರ್ಟಿ ಸಂಸ್ಥಾಪಕ ಉಪೇಂದ್ರ, ಹಿರಿಯ ನಟ ಅನಂತ್ ನಾಗ್  ಪುಲ್ವಾಮಾದಲ್ಲಿನ ಸಿಆರ್ ಪಿಎಫ್ ಸೈನಿಕರ ಮೇಲಿನ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. "ಮುಳ್ಳನ್ನು ಮುಳ್ಳಿಂದಲೇ ತೆಗೀರಿ" ಎಂದು ಅವರು ಕರೆ ನೀಡಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಉಪೇಂದ್ರ ತಾವು ಟ್ವೀಟ್ ಮಾಡಿದ್ದು "ಮುಳ್ಳನ್ನು ಮುಳ್ಲಿಂದಲೇ ತೆಗಿಯಬೇಕು" ಎಂದಿದ್ದಾರೆ. 
"ಮುಳ್ಳನ್ನ ಮುಳ್ಳಿಂದಲೇ ತೆಗೆಯಬೇಕು !      ಜನರ ಜೊತೆ ಜನರ ತರ ಇರುವ ಉಗ್ರವಾದಿಗಳನ್ನು ಕಂಡುಹಿಡಿಯಲು ಕಷ್ಟ. ಹಾಗೇ ನಮ್ಮ ವೀರ ಯೋಧರೂ ಸಮವಸ್ತ್ರವಿಲ್ಲದೇ ಅಲ್ಲಿನ ಜನರ ಜೊತೆ ಬೆರೆತು ಉಗ್ರವಾದಿಗಳನ್ನು ಹೊಡೆದುರುಳಿಸಬೇಕು."  ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
Pulwama attack fallout: J&K administration withdraws securityseparatist leaders
ಅಲ್ಲದೆ ಸಾವಿರಾರು ಕೋಟಿ ಶಸ್ತ್ರಾಸ್ತ್ರ ವ್ಯಾಪಾರಕ್ಕಾಗಿ ಅಂತರರಾಷ್ಟ್ರೀಯ ಆಶೆಪಾತಕ ರಾಜಕೀಯ ವ್ಯಾಪಾರಿ ದುರುಳರು ಆತಂಕವಾದಿ ಉಗ್ರರಲ್ಲಿ ಧರ್ಮದ ವಿಷ ಬೀಜ ಬಿತ್ತಿ ಹಣ ಹೂಡುತ್ತಿರುವ ಕಾರಣ  ನಮ್ಮ ದೇಶದ ವೀರ ಯೋಧರ ಮತ್ತು ಮುಗ್ಧ ಜನರ ರಕ್ತಪಾತವಾಗುತ್ತಿದೆ‌ ಮತ್ತು ಮಾರಣಹೋಮವಾಗುತ್ತಿದೆ.   ಧಿಕ್ಕಾರ ಈ ಅವ್ಯವಸ್ಥೆಗೆ...." ಎಂದೂ ಗುಡುಗಿದ್ದಾರೆ.
ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು ಇದು ದೇಶದ ಜನರನ್ನು ಕಂಗೆಡಿಸಿದೆ. ಸಿನಿಮಾ, ಕ್ರೀಡೆ ಹಾಗೂ ರಾಜಕೀಯ ವಲಯದ ಬಹಳಷ್ಟು ಗಣ್ಯ ವ್ಯಕ್ತಿಗಳು  ಈ ದಾಳಿಯನ್ನು ಖಂಡಿಸಿದ್ದಾರೆ. ಯೋಧರ ಪ್ರಾಣತ್ಯಾಗಕ್ಕಾಗಿ ಕಂಬನಿ ಮಿಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT