ಠಾಕೂರ್ ಅನೂಪ್ ಸಿಂಗ್ 
ಸಿನಿಮಾ ಸುದ್ದಿ

ನನ್ನ ವ್ಯಕ್ತಿತ್ವವೇ ನನ್ನ ಪಾತ್ರ ಸೃಷ್ಟಿಸಲು ಚಿತ್ರ ನಿರ್ಮಾಪಕರಿಗೆ ಸ್ಪೂರ್ತಿ: ಠಾಕೂರ್ ಅನೂಪ್ ಸಿಂಗ್

ನಾಯಕ, ಖಳನಾಯಕ ಎರಡೂ ಪಾತ್ರಗಳಿಗೆ ಸರಿಹೊಂದುವ ನಟರು ಸಿಕ್ಕರೆ ಎಲ್ಲರಿಗೆ ಒಳ್ಳೆಯದೆಂದು ನಾವು ಆಗಾಗ ಹೇಳುವುದು ಸಾಮಾನ್ಯ. ಈ ಮಾತಿಗೆ ಒಪ್ಪುವ ಇತ್ತೀಚಿನ ಉದಾಹಣೆಯಾಗಿ ಕಾಣುವ ವ್ಯಕ್ತಿ ....

ಬೆಂಗಳೂರು: ನಾಯಕ, ಖಳನಾಯಕ ಎರಡೂ ಪಾತ್ರಗಳಿಗೆ ಸರಿಹೊಂದುವ ನಟರು ಸಿಕ್ಕರೆ ಎಲ್ಲರಿಗೆ ಒಳ್ಳೆಯದೆಂದು ನಾವು ಆಗಾಗ ಹೇಳುವುದು ಸಾಮಾನ್ಯ. ಈ ಮಾತಿಗೆ ಒಪ್ಪುವ ಇತ್ತೀಚಿನ ಉದಾಹಣೆಯಾಗಿ ಕಾಣುವ ವ್ಯಕ್ತಿ - ಠಾಕೂರ್ ಅನೂಪ್ ಸಿಂಗ್. ಸಿಂಗಮ್-3 ಚಿತ್ರದೊಡನೆ ತಮಿಳು ಚಿತ್ರರಂಗ ಪ್ರವೇಶಿಸಿದ್ದ ಅನೂಪ್ ತೆಲುವಿನ ಲ್ಲಿ ವಿನ್ನರ್ ಕಮಾಂಡೋ  2 ಹಾಗೂ ಹಿಂದಿಯಲ್ಲಿ ರೋಗ್ ಮೂಲಕ ಛಾಪು ಮೂಡಿಸಿದ್ದಾರೆ.ಈಗ ಇವರು ಕನ್ನಡದ "ಯಜಮಾನ"ದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದು ಇದೇ ನಟ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ "ಉದ್ಘರ್ಷ" ದಲ್ಲಿ ಪರಿಪೂರ್ಣ ಪ್ರಮಾಣದ ನಾಯಕರಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
"ಕಲಾವಿದನ ದೃಷ್ಟಿಕೋನದಿಂದ ಹೀರೋ ಅಥವಾ ಖಳನಾಯಕ ಎನ್ನುವುದು ಮುಖ್ಯವಲ್ಲ. ನನ್ನ ಉದ್ದೇಶ ಎಂದರೆ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯವನ್ನುಗೆಲ್ಲುವುದು" ಎಂಟು ಚಿತ್ರಗಳಲ್ಲಿ ನಟಿಸಿದ ನಟ ಹೇಳಿದ್ದಾರೆ.
"2015 ರಲ್ಲಿ ಮಿಸ್ಟರ್ ವರ್ಲ್ಡ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನನಗೆ ಚಿತ್ರಗಳಲ್ಲಿ ನಟಿಸಲು ಅವಕಾಶ ದೊರಕಿತ್ತು.ಹಾಗೆಯೇ ನನ್ನ ವ್ಯಕ್ತಿತ್ವ ನಿಲುವು ನನಗೆ ನಿರ್ಣಾಯಕ ಪಾತ್ರ ದೊರಕಲು ಸಹಕಾರಿಯಾಗಿದೆ.ತಮಿಳು, ತೆಲುಗು, ಕನ್ನಡ, ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದ ಅನೂಪ್ ಮರಾಠಿ ಚಿತ್ರರಂಗದಲ್ಲಿ ಸಹ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. . "ನಾನು ಒಳ್ಳೆಯ ನಾಯಕನಾಗಿದ್ದರೂ, ನಾನು ಒಳ್ಳೆಯ ಖಳನಾಯಕ ಸಹ ಆಗಬಹುದು.ಇದು ಜನರ ದೃಷ್ಟಿಕೋನವನ್ನು ಅವಲಂಬಿಸಿದೆ. ಎಂದು ಅವರು ಹೇಳಿದ್ದಾರೆ.
"ಯಜಮಾನ"ದಲ್ಲಿ ದರ್ಶನ್ ಎದುರು ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದು "ನಾನು ಖಳನಟನಾಗಿದ್ದರೂ ಸಹ ನನ್ನ ಪಾತ್ರೆಅ ಇರುವ ಪ್ರತಿ ಸನ್ನಿವೇಶದಲ್ಲಿ ನಾನು ನಾಯಕನಿಗೆ ಸಮಾನನಿದ್ದೇನೆ. ಇದರಲ್ಲಿ ಯಾವ ಅಪನಂಬಿಕೆ ನನಗಿಲ್ಲ". "ಖಳನಾಯಕರ ವಿಷಯದಲ್ಲಿ, ಕೆಲವು ನಿಷೇಧಗಳಿವೆ" ಎಂದ ಅನೂಪ್ ತಾನು ನೋಡಿದ ನಟರಾದ ಸೂರ್ಯ, ಅಲ್ಲು ಅರ್ಜುನ್, ದರ್ಶನ್  ಮೂವರೂ ಸಹ ಹೊಂದಿರುವ ಸಾಮಾನ್ಯ ಗುಣವೆಂದರೆ ಅವರು ತುಂಬಾ ಸಾಮಾನ್ಯ ಮತ್ತು ವಿನಮ್ರರಾಗಿದ್ದಾರೆ."
"ಯಜಮಾನ ಚಿತ್ರ ನನಗೆ ಹೊಸದೊಂದು ಪುಶ್ ನೀಡುತ್ತದೆ, ಈ ಚಿತ್ರದಲ್ಲಿ ನನ್ನ ಎಂಟ್ರಿ, ಸ್ಟೈಲ್ ಗಾಗಿ ದೊಡ್ಡ ಮೊತ್ತದ ಖರ್ಚು ಮಾಡಲಾಗಿದೆ.ಚಿತ್ರದಲ್ಲಿ ದರ್ಶನ್ ಹಾಗೂ ನನ್ನ ನಡುವಿನ ಪಾತ್ರದಲ್ಲಿನ ಘರ್ಷಣೆ ಬಹುದೊಡ್ಡ ಪ್ಲಸ್ ಪಾಯಿಂಟ್" ಅವರು ಹೇಳಿದ್ದಾರೆ.
"ಕನ್ನಡ ಹೊಸ ಭಾಷೆಯಾಗಿರುವ ಕಾರಣ ನನಗೆ ಇನ್ನಷ್ಟು ಕುತೂಹಲವಿದೆ. ವಿ. ಹರಿಕೃಷ್ಣ  ಅವರಿಂದ ಸ್ಕ್ರಿಪ್ಟ್ ಗಳನ್ನು ಮುಂಚಿತವಾಗಿ ತರಿಸಿಕೊಂಡು ಓದಲು ಪ್ರಯತ್ನಿಸಿದ್ದೇನೆ.ಹಾಗೆಯೇ ನಾನು ಯಾರಿಂದ ಪ್ರೇರಿತನಾಗಿ ಮಾತನಾಡುವಂತೆ ಕಾಣಬಾರದು ಎನ್ನುವುದು ನನ್ನ ಅಭಿಲಾಷೆ. ಇದು ನನ್ನ ಇಮೇಜ್ ಅನ್ನು ಕುಗ್ಗಿಸುತ್ತದೆ." ಅನೂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT