ಚಂಬಲ್ ಸಿನಿಮಾದ ದೃಶ್ಯ 
ಸಿನಿಮಾ ಸುದ್ದಿ

ಐಎಎಸ್ ಅಧಿಕಾರಿಯ ಕಥೆಯನ್ನು ಲಘುವಾಗಿ ಹೇಳಲು ಆಗದು: ಸತೀಶ್ ನೀನಾಸಂ

ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಂಬಲ್ ಚಿತ್ರದಲ್ಲಿ ಸತೀಶ್ ನೀನಾಸಂ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಂದು ಪಾತ್ರಗಳು ಕಲಾವಿದರ ವ್ಯಕ್ತಿತ್ವವನ್ನು ರೂಪಿಸಲಿವೆ ಎಂದು ಹೇಳಿಕೊಂಡಿದ್ದಾರೆ

ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಂಬಲ್ ಚಿತ್ರದಲ್ಲಿ ಸತೀಶ್ ನೀನಾಸಂ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಂದು ಪಾತ್ರಗಳು ಕಲಾವಿದರ ವ್ಯಕ್ತಿತ್ವವನ್ನು ರೂಪಿಸಲಿವೆ ಎಂದು ಹೇಳಿಕೊಂಡಿದ್ದಾರೆ

ಈ ಪಾತ್ರದ ಮೂಲಕ  ಪ್ರೇಕ್ಷಕರು ಭಿನ್ನ ರೀತಿಯಲ್ಲಿ ತಮ್ಮನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಇಟ್ಟುಕೊಂಡಿರುವ ಸತೀಶ್ ನೀನಾಸಂ,  ನೈಜ ಚಿತ್ರದ ಘಟನಾವಳಿಗಳಿಂದ ನಿರ್ದೇಶಕರು, ಕಥೆಗಾರರ ಚಿಂತನೆಗಳು ಪ್ರೇರಣೆ ಪಡೆದಿವೆ. ಆದಾಗ್ಯೂ, ಪ್ರೇಕ್ಷಕರು ಹೇಗೆ ಸಿನಿಮಾವನ್ನು ಸ್ವೀಕರಿಸುತ್ತಾರೆ ಎಂಬುದು ಬಹುಮುಖ್ಯವಾಗಲಿದೆ ಎನ್ನುತ್ತಾರೆ.

ಜಾಕೋಬ್  ವರ್ಗೀಸ್ ಅಂತಹ ಉತ್ತಮ ನಿರ್ದೇಶಕರು  ಚಿತ್ರ ಮಾಡಿದ್ದು, ಐಎಎಸ್ ಅಧಿಕಾರಿಗಳ ಕುರಿತಾದ ಕಥೆಯನ್ನು ಲಘುವಾಗಿ ಹೇಳಲು ಆಗದು. ವಿವಿಧ ಆಯಾಮದಲ್ಲಿ  ತೋರಿಸಲಾಗಿದ್ದು, ಚಿತ್ರದಲ್ಲಿ ಅಫೀಸರ್ಸ್ ಆಗಿ ನಟಿಸಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ. ಸೇವೆ ಮಾಡ ಬಯಸುವ ಯುವಕರನ್ನು ಈ ಸಿನಿಮಾ ಆಕರ್ಷಿಸಲಿದೆ ಎಂದಿದ್ದಾರೆ.

ಐಎಎಸ್ ಅಧಿಕಾರಿ ಸುಭಾಷ್ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದು, ಅವರು ಕೂಡಾ ಯುವಕರಿಗೆ ಸ್ಪೂರ್ತಿ ತುಂಬಿದ್ದಾರೆ.  ಚಂಬಲ್ ಟ್ರೈಲರ್  ಬಿಡುಗಡೆ ನಂತರ ಸಿಕ್ಕ ಪ್ರತಿಕ್ರಿಯೆಗೆ ಅಚ್ಚರಿಗೊಂಡಿರುವುದಾಗಿ ತಿಳಿಸಿದರು.
ಸಿನಿಮಾದಲ್ಲಿನ ಪಾತ್ರ ಹಾಗೂ ಡಿಕೆ ರವಿ ಅವರೊಂದಿಗೆ ಹೋಲಿಸಿ ನೋಡಲಾಗುತ್ತದೆ. ರವಿ ಕೂಡಾ ಐಎಎಸ್ ಅಪೀಸರ್ಸ್ ಆಗಿದ್ದು, ಅವರ ಕೆಲವೊಂದು ಅಂಶಗಳು ಸಿನಿಮಾದಲ್ಲಿ ಪ್ರಭಾವಿತಗೊಂಡಿವೆ . ಆದರೆ, ಇದು ಒಂದೇ ವ್ಯಕ್ತಿ ಮೇಲೆ ರೂಪುಗೊಂಡಿಲ್ಲ ಎಂದು ಸತೀಶ್ ಹೇಳಿದ್ದಾರೆ.
ಚಂಬಲ್ ಸಿನಿಮಾ ಐಎಎಸ್ ಅಧಿಕಾರಿಗಳ ಸೇವೆ ಬಗ್ಗೆ ವಿವರಣೆ ನೀಡುವ ಸಿನಿಮಾವಾಗಿದ್ದು, ಪ್ರೇಕ್ಷಕರು ಸಿನಿಮಾ ನೋಡಬೇಕೆಂದು ಸತೀಶ್ ನೀನಾಸಂ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!