ವಿನೋದ್ ಪ್ರಭಾಕರ್, ಸುಘೋಷ್ ಗಾಗಿ ಚಿತ್ರ ಮಾಡಲಿದ್ದಾರೆ ಮಹೇಶ್ ಬಾಬು! 
ಸಿನಿಮಾ ಸುದ್ದಿ

ವಿನೋದ್ ಪ್ರಭಾಕರ್, ಸುಘೋಷ್ ಗಾಗಿ ಚಿತ್ರ ಮಾಡಲಿದ್ದಾರೆ ಮಹೇಶ್ ಬಾಬು!

ನಿರ್ದೇಶಕ ಮಹೇಶ್ ಬಾಬು "ಅತಿರಥ" ಬಳಿಕ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಬಾರಿ ಸಹ ಅವರು ಹೊಸಮುಖವನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುವ ಪ್ರಯತ್ನದಲ್ಲಿದ್ದು....

ಬೆಂಗಳೂರು: ನಿರ್ದೇಶಕ ಮಹೇಶ್ ಬಾಬು "ಅತಿರಥ" ಬಳಿಕ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಬಾರಿ ಸಹ ಅವರು ಹೊಸಮುಖವನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುವ ಪ್ರಯತ್ನದಲ್ಲಿದ್ದು ಸುಘೋಷ್ ಎಂಬ ಸಾಪ್ಟ್ ವೇರ್ ಉದ್ಯೋಗಿಯೊಬ್ಬನನ್ನು ಅವರು ಆಯ್ಕೆ ಮಾಡಿದ್ದಾರೆ.
ಸುಘೋಷ್ ಅಮೇರಿಕಾದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ನಟನೆಯ ಕಡೆಗೆ ಆಸಕ್ತಿ ತಾಳಿದ್ದನು.ಈ ವೇಳೆ ಬಣ್ಣದ ಲೋಕ ಅವನನ್ನು ಆಕರ್ಷಿಸಿದೆ. ಮಹೇಶ್ ಬಾಬು ಚಿತ್ರಕ್ಕೆ ಇದೀಗ ಪೂರ್ವ ತಯಾರಿ ನಡೆಯುತ್ತಿದ್ದು ಬಾಬು ತಮ್ಮ ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ.ಇನ್ನೊಂದು ವಾರದಲ್ಲಿ ನಾಯಕಿಯನ್ನು ಅಂತಿಮಗೊಳಿಸುವ ಯೋಜನೆ ಅವರದಾಗಿದೆ.
ಏತನ್ಮಧ್ಯೆ ಮಹೇಶ್ ಬಾಬು ವಿನೋದ್ ಪ್ರಭಾಕರ್ ಜತೆಗೆ ಇನೊಂದು ಚಿತ್ರ ಮಾಡಲು ತಯಾರಾಗಿದ್ದು ಅದೊಂದು ಆಕ್ಷನ್ ಚಿತ್ರವಾಗಿರಲಿದೆ. ಇದಾಗಲೇ ಚಿತ್ರ ಪ್ರಿ ಪ್ರೊಡಕ್ಷನ್ ಘಂತದಲ್ಲಿದೆ.ಚಿತ್ರೀಕರಣ ಪ್ರಾರಂಭಕ್ಕೆ ಸಿದ್ದವಾಗುವಾಗ ನಿರ್ದೇಶಕರು ಈ ಕುರಿತಂತೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT