ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಲು ಯತ್ನಿಸಿ ವಿಫಲವಾದ ಸೌಮ್ಯ ಎಂಬ ಅಭಿಮಾನಿ ಅಭಿಮಾನಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ನಿಮ್ಮನ್ನು ಭೇಟಿಯಾಗಲೇ ಬೇಕು ಎಂದು ಒತ್ತಾಯಿಸಿದ್ದಾರೆ.
ನನಗೆ ತಂದೆ ಇಲ್ಲ. ಅಂದರೆ ತೀರಿಕೊಂಡಿದ್ದಾರೆ. ನಿಮ್ಮನ್ನು ನೋಡಬೇಕು. ನಿಮ್ಮ ಭೇಟಿಗಾಗಿ ತುಂಬ ಪ್ರಯತ್ನಿಸಿದೆ. ಆದರೆ, ಅವಕಾಶ ಸಿಗಲಿಲ್ಲ. ನಿಮ್ಮ ಜತೆಗಿರುವ ವ್ಯಕ್ತಿಗಳ ಬಳಿಯೂ ಕೇಳಿದೆ. ಆದರೆ, ಅವರು ನಿಮ್ಮನ್ನು ಭೇಟಿ ಮಾಡಿಸಲಿಲ್ಲ. ನೀವು ಒಂದು ದಿನ ನನ್ನನ್ನು ಭೇಟಿ ಮಾಡಲೇಬೇಕು. ಒಂದು ದಿನಾಂಕ ಹೇಳಿ ಎಂದು ಮನವಿ ಮಾಡಿದ್ದಾಳೆ. ಈ ಪತ್ರವನ್ನು ಸುದೀಪ್ ಅವರ ಇನ್ನೋರ್ವ ಅಭಿಮಾನಿ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಪತ್ರದ ಪೋಸ್ಟ್ ಗೆ ರಿಟ್ವೀಟ್ ಮಾಡಿದ ಸುದೀಪ್ ಅವರು, ಸೌಮ್ಯಾ ಅವರ ಅಭಿಮಾನ ನೋಡಿ ಸಂತೋಷವಾಯಿತು. ಆದರೆ, ರಕ್ತದಲ್ಲಿ ಪತ್ರ ಬರೆದಿದ್ದು ನೋಡಿ ನೋವಾಯಿತು. ಸೌಮ್ಯಾ ಅವರ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ದಯವಿಟ್ಟು ಯಾರೂ ಹೀಗೆ ಮಾಡಬೇಡಿ. ನನ್ನ ಮಾತಿನ ಮೇಲೆ ಗೌರವ ಇದ್ದರೆ ಇನ್ನೊಮ್ಮೆ ಇಂಥದ್ದನ್ನು ಮಾಡಬೇಡಿ ಎಂದಿದ್ದಾರೆ.