ಚೆನ್ನೈ: ನಂದ ಕಿಶೋರ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿ ದಿವಂಗತ ಅಂಬರೀಶ್ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಹೌದು ಚಿತ್ರದಲ್ಲಿ ಅಂಬರೀಶ್ ಅವರ ಪ್ರತಿಮೆ ಪಕ್ಕದಲ್ಲಿ ನಿಂತು ಧ್ರುವ ಸರ್ಜಾ ಫೋಟೋಗೆ ಫೋಸ್ ಕೊಟ್ಟಿದ್ದು ಚಿತ್ರದಲ್ಲಿ ಅಂಬರೀಶ್ ಅವರ ಗುಣಗಾನ ಮಾಡಲಿದ್ದಾರೆ.
ಈ ಫೋಟೋವನ್ನು ಟ್ವೀಟರ್ ನಲ್ಲಿ ಧ್ರುವ ಸರ್ಜಾ ಶೇರ್ ಮಾಡಿದ್ದು ಅದರಲ್ಲಿ ಪೊಗರು ಚಿತ್ರದ ಮೊದಲ ಹಂತದ ಚಿತ್ರೀಕರಣಕ್ಕೆ ಅಂಬರೀಶ್ ಮಾಮಾ ಬಂದಿದ್ದರು. ಅವರ ಬೆಂಬಲ ನಮಗಿದೆ. ಕೊನೆಯವರೆಗೂ ನಿಮ್ಮನ್ನು ನೆನೆಯುತ್ತೇನೆ. ಮಿಸ್ ಯೂ ಕನ್ವರ್ ಲಾಲ್ ಜೈ ಆಂಜನೇಯ ಎಂದು ಬರೆದುಕೊಂಡಿದ್ದಾರೆ.
ಚಿತ್ರವನ್ನು ಅಧ್ಯಕ್ಷ ಚಿತ್ರವನ್ನು ನಿರ್ಮಿಸಿದ್ದ ಬಿಕೆ ಗಂಗಾಧರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.