ಸೈರಾ ನರಸಿಂಹಾ ರೆಡ್ಡಿಗೆ ಪ್ರತಿಭಟನೆಯ ಬಿಸಿ 
ಸಿನಿಮಾ ಸುದ್ದಿ

ಬೀದರ್: 'ಸೈರಾ ನರಸಿಂಹಾ ರೆಡ್ಡಿ' ಚಿತ್ರೀಕರಣಕ್ಕೆ ಪ್ರತಿಭಟನೆಯ ಬಿಸಿ, ಅರ್ಧಕ್ಕೆ ನಿಂತ ಚಿತ್ರೀಕರಣ, ಕೋಟಿ ಕೋಟಿ ನಷ್ಟ

ಐತಿಹಾಸಿಕ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಚಿತ್ರೀಕರಣ ಸ್ಥಳೀಯರ ಪ್ರತಿಭಟನೆಯಿಂದಾಗಿ ಸ್ಥಗಿಕೊಂಡಿದ್ದು, ಒಂದು ದೃಶ್ಯ ಸೆರೆ ಹಿಡಿಯದೇ ಚಿತ್ರತಂಡ ವಾಪಸ್ ಆಗಿದೆ. ಇದರಿಂದ ಚಿತ್ರ ತಂಡಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಬೀದರ್: ಬೀದರ್ ಜಿಲ್ಲೆಯ ಐತಿಹಾಸಿಕ ಬಹಮನಿ ಸುಲ್ತಾನರ ಕೋಟೆಯಲ್ಲಿ ಇಂದು ನಡೆಯಬೇಕಿದ್ದ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಐತಿಹಾಸಿಕ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಚಿತ್ರೀಕರಣ ಸ್ಥಳೀಯರ ಪ್ರತಿಭಟನೆಯಿಂದಾಗಿ ಸ್ಥಗಿಕೊಂಡಿದ್ದು, ಒಂದು ದೃಶ್ಯ ಸೆರೆ ಹಿಡಿಯದೇ ಚಿತ್ರತಂಡ ವಾಪಸ್ ಆಗಿದೆ. ಇದರಿಂದ ಚಿತ್ರ ತಂಡಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದರ ವರದಿಯಂತೆ ಬೀದರ್ ನಲ್ಲಿ ನಡೆಯಬೇಕಿದ್ದ ‘ಸೈರಾ ನರಸಿಂಹ ರೆಡ್ಡಿ’ ಶೂಟಿಂಗ್ ಅರ್ಧಕ್ಕೆ ನಿಂತು ಚಿತ್ರ ತಂಡ ಹೈದ್ರಾಬಾದ್​​ಗೆ ವಾಪಸ್ ತೆರಳಿದೆ. ಚಿತ್ರತಂಡ ಪುರಾತತ್ವ ಇಲಾಖೆಯಿಂದ ಪರವಾನಿಗೆ ಪಡೆದು ನಿನ್ನೆಯೇ ನಗರಕ್ಕೆ ಆಗಮಿಸಿ ಬಹಮನಿ ಸುಲ್ತಾನರ ಕೋಟೆಯಲ್ಲಿ ಚಿತ್ರದ ದೃಶ್ಯಕ್ಕೆ ಬೇಕಾದ ಎಲ್ಲ ರೀತಿಯ ಸೆಟ್ ಗಳ​​​​​ನ್ನು ಹಾಕಿತ್ತು. ಆದರೆ ಕೋಟೆಯ ಮಸೀದಿಯಲ್ಲಿ ಹಿಂದೂ ದೇವರುಗಳು ಮೂರ್ತಿ ಇಟ್ಟಿದ್ದರಿಂದ ಮುಸ್ಲಿಂ ಯುವಕರ ಗುಂಪು ಅದನ್ನು ತೀವ್ರವಾಗಿ ವಿರೋಧಿಸಿ ನಿನ್ನೆ ರಾತ್ರಿಯೇ ಜಿಲ್ಲಾಧಿಕಾರಿಗಳ ಮನೆ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಪೊಲೀಸರು ರಾತ್ರೋ ರಾತ್ರಿ ಶೂಟಿಂಗ್ ಸೆಟ್ ತೆರವುಗೊಳಿಸಿದ್ದರಿಂದ ಇಂದು ಚಿತ್ರತಂಡ ಒಂದೂ ದೃಶ್ಯ ಸೆರೆ ಹಿಡಿಯದೇ ವಾಪಸ್ ತೆರಳಿದೆ.
ಕೋಟಿ ಕೋಟಿ ಲಾಸ್!
ಸೈರಾ ನರಸಿಂಹ ರೆಡ್ಡಿ.. ಐತಿಹಾಸಿಕ ಸಿನಿಮಾವಾಗಿದ್ದು. ತೆಲುಗುನಲ್ಲಿ ಮೂಡಿ ಬರುತ್ತಿರುವ ಹೈ ಬಜೆಟ್​​ ಸಿನಿಮಾ ಇದಾಗಿದ್ದರಿಂದ ಸಿನಿಮಾಗೆ ತಕ್ಕಂತೆ ಸಾಕಷ್ಟು ಹಣ ಖರ್ಚು ಮಾಡಿ ಅರಮನೆಯ ಸೆಟ್ ಹಾಕಲಾಗಿತ್ತು. ಸಿನಿಮಾದಲ್ಲಿ ಹೀರೋ ಪಾತ್ರ ನಿರ್ವಹಿಸುತಿದ್ದ ಚಿರಂಜೀವಿ, ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್, ಹಾಗೂ ಅನೇಕ ಕಲಾವಿದರು ಚಿತ್ರೀಕರಣಕ್ಕೆ ಆಗಮಿಸಿದ್ದರು.
ಇನ್ನೇನು ಹಾಕಿದ ಸೆಟ್ ನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಬೇಕು ಎನ್ನುವುಷ್ಟರಲ್ಲಿ ಪ್ರತಿಭಟನೆಯಿಂದ ಶೂಟಿಂಗ್ ಮಾಡದೆ ಚಿತ್ರತಂಡ ಹೈದ್ರಾಬಾದ್ ಗೆ ವಾಪಸ್ ತೆರಳಿತು. ಇದರಿಂದ ಸುಮಾರು ಎರಡು ಕೋಟಿಗೂ ಅಧಿಕ ಹಣ ಲಾಸ್ ಆಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. 
ಸ್ಥಳೀಯರ ಮೂರ್ಖತನದಿಂದಾಗಿ ಜಿಲ್ಲೆಯ ಪ್ರವಾಸೋಧ್ಯಮಕ್ಕೆ ಧಕ್ಕೆ
ಇನ್ನು ಐತಿಹಾಸಿಕ ಕೋಟೆ ಕೊತ್ತಲುಗಳಿರುವ ಬೀದರ್ ನಗರವನ್ನು ಪ್ರವಾಸಿಗರ ಸ್ವರ್ಗ ಮಾಡಬೇಕು ಎಂದು ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹಾಗೂ ಡಿಸಿ ಎಚ್.ಆರ್. ಮಹದೇವ ಸಾಕಷ್ಟು ಪ್ರಯತ್ನ ಮಾಡುತಿದ್ದರು‌. ಈ ಐತಿಹಾಸಿಕ ಸಿನಿಮಾದಿಂದ ದೇಶಾದ್ಯಂತ ಜನ ಬೀದರ್ ಅ​ನ್ನು ಇನ್ನೂ ಗುರುತಿಸುವಂತೆ ಆಗುತಿತ್ತು. ಆದರೆ ಈ ರೀತಿಯ ಬೆಳವಣಿಗೆಯಿಂದ ಜಿಲ್ಲೆಗೆ ಕಪ್ಪು ಚುಕ್ಕೆ  ಅಂಟಿಕೊಂಡಂತಾಯಿತು. ಅಲ್ಲದೆ ಸ್ಥಳೀಯರ ಮೂರ್ಖತನದಿಂದಾಗಿ ಜಿಲ್ಲೆಯ ಪ್ರವಾಸೋಧ್ಯಮಕ್ಕೂ ಪೆಟ್ಟು ಬಿದ್ದಂತಾಗಿದೆ. ಮಜೀದ್ ನಲ್ಲಿರು ಮೂರ್ತಿಗಳನ್ನು ತೆರವು ಮಾಡಲು ಚಿತ್ರ ತಂಡದ ಮನವೊಲಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT