ಬೆಂಗಳೂರು: ಕೋಲ್ಕತಾ ಹಾಗೂ ಮನಾಲಿಯಲ್ಲಿ ನಡೆಯುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಚಿತ್ರ ತಂಡ ಇದೀಗ ಬೆಂಗಳೂರಿಗೆ ವಾಪಸ್ಸಾಗಿದೆ.
ಕಳೆದ 15 ದಿನಗಳಿಂದ ಮನಾಲಿಯಲ್ಲಿ -14 ಡಿಗ್ರಿ ಚಳಿಯಲ್ಲಿ ಗೀತಾ ತಂಡ ಚಿತ್ರೀಕರಣ ಕಂಪ್ಲೀಟ್ ಮಾಡಿಕೊಂಡು ನಗರಕ್ಕೆ ವಾಪಸ್ಸಾಗಿದೆ.
ಕೋಲ್ಕತಾದಲ್ಲಿ ಚಿತ್ರೀಕರಣ ಉತ್ತಮವಾಗಿ ನಡೆಸಲಾಗಿತ್ತು. ಆದರೆ, ಮನಾಲಿಯಲ್ಲಿ ಹವಾಮಾನ ವಾತಾವರಣ ಹದಗೆಟ್ಟಿದ್ದರಿಂದಾಗಿ ಚಿತ್ರೀಕರಣಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. -14 ಡಿಗ್ರಿ ಸೆಲ್ಸಿಯಸ್ ನಲ್ಲಿ ಚಿತ್ರೀಕರಣ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೂ ಹೇಗೋ ಸಿನಿಮಾದ ಕೆಲ ದೃಶ್ಯಗಳಿಗೆ ಹಾಗೂ ಹಾಡುಗಳಿಗೆ ಚಿತ್ರೀಕರಣ ಮಾಡಲಾಯಿತು ಎಂದು ನಿರ್ದೇಶಕ ವಿಜಯ್ ನಾಗೇಂದ್ರ ಅವರು ಹೇಳಿದ್ದಾರೆ.
15 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ನಾವು ಚಿತ್ರದ ಶೇ.20 ರಷ್ಟು ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆಂದು ತಿಳಿಸಿದ್ದಾರೆ.
ಚಿತ್ರದ ಎರಡನೇ ಭಾಗದ ಚಿತ್ರೀಕರಣ ಕುರಿತಂತೆ ಮಾತುಕತೆಗಳು ನಡೆಯುತ್ತಿವೆ. ಜ.28ಕ್ಕೆ ಚಿತ್ರದ ತಂಡ ಮತ್ತೆ ಕೆಲಸಕ್ಕೆ ಹಾಜರಾಗಲಿದೆ. ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ಗಣೇಶ್ ಅವರು ಬ್ಯುಸಿಯಾಗಿದ್ದಾರೆ. 99 ಚಿತ್ರವನ್ನು ಪ್ರೀತಂ ಗುಬ್ಬಿಯವರು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ಮತ್ತೆ ಗೀತಾ ಚಿತ್ರೀಕರಣಕ್ಕೆ ಗಣೇಶ್ ಮರಳಿದ್ದಾರೆಂದು ವರದಿಗಳು ತಿಳಿಸಿವೆ.
ಈ ನಡುವೆ ಸಮಯವನ್ನು ವ್ಯರ್ಥ ಮಾಡದ ನಿರ್ದೇಶಕ ನಾಗೇಂದ್ರ ಅವರು ಎಡಿಟಿಂಗ್ ಭಾಗದ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos