ಬೆಂಗಳೂರು: ಕನ್ನಡಕ್ಕೆ ಇನ್ನೊಬ್ಬ ನಾಯಕನಟನ ಎಂಟ್ರಿಗೆ ವೇದಿಕೆ ಸಿದ್ದವಾಗಿದೆ. "ಕಿಸ್" ಚಿತ್ರಕ್ಕಾಗಿ ವಿರಾಟ್ ಎಂಬ ಡ್ಯಾಸ್ನರ್ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಎಪಿ ಅರ್ಜುನ್ ಅವರ ಚಲನಚಿತ್ರದಲ್ಲಿ ನಟಿಸಿರುವ ವಿರಾಟ್ ಅದರಲ್ಲಿನ ರ್ಯಾಪರ್ ಚಂದನ್ ಶೆಟ್ಟಿ ಹಾಡಿರುವ "ಶೀಲಾ ಸುಶೀಲಾ" ಹಾಡಿನಲ್ಲಿ ಹಾಕಿರುವ ಹೆಜ್ಜೆಗೆ ಪ್ರೇಕ್ಷಕ ಫಿದಾ ಆಗಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ನೀಡಿದ್ದ ಈ ಹಾಡು ಹೊಸ ವರ್ಷದ ಮೊದಲ ದಿನ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಾಕಷ್ಟು ವೈರಲ್ ಆಗಿದೆ.
ನಿರ್ದೇಶಕ ಅರ್ಜುನ್ ಹೇಳಿದಂತೆ "ವಿರಾಟ್ ಓರ್ವ ತರಬೇತು ಹೊಂದಿರುವ ನೃತ್ಯಪಟು.ಬಾಲ್ಯದಿಂದಲೂ ನೃತ್ಯ ಅಭ್ಯಾಸ ಪಡೆದಿದ್ದ ನಟನಿಗೆ ಇದುವರೆಗೆ ಚಲನಚಿತ್ರದಲ್ಲಿ ತನ್ನ ಪ್ರತಿಭೆ ತೋರಲು ಅವಕಾಶವಿರಲಿಲ್ಲ. ಹೀಗಾಗಿ ಚಿತ್ರವೊಂದರಲ್ಲಿ ನಟನೆಗೆ, ನೃತ್ಯ ಮಾಡಲು ಆತ ಎಳರಿಂದ ಎಂಟು ತಿಂಗಳು ತರಬೇತಿ ಪಡೆಇದ್ದು ಈಗ ಚಿತ್ರದಲ್ಲಿ ನಟಿಸುವುದಕ್ಕೆ ಫಿಟ್ ಆಗಿದ್ದಾರೆ"
ಇನ್ನು "ಕಿಸ್" ಚಿತ್ರ ನಿರ್ಮಾಪಕ ರವಿ ಕುಮಾರ್ ತಮ್ಮ ಮುಂದಿನ ಚಿತ್ರಕ್ಕೆ ಇದಾಗಲೇ ವಿರಾಟ್ ಅವರನ್ನು ಬುಕ್ ಮಾಡಿಕೊಂಡಿದ್ದಾರೆ.
ರಾಷ್ಟ್ರಕೂಟ ಪಿಕ್ಚರ್ಸ್ ಅಡಿಯಲ್ಲಿ ತಯಾರಿಸಲಾದ ಈ ಚಿತ್ರದ ಮುಖೇನ ಬೆಳ್ಳಿ ತೆರೆ ಮೇಲೆ ಇನ್ನೊಬ್ಬ ನಾಯಕ ಮಿಂಚುವುದು ಖಚಿತವಾಗಿದೆ.