ಸಿನಿಮಾ ಸುದ್ದಿ

ಚಂದನವನಕ್ಕೆ ಶಾಕ್: ಐಟಿ ಕಣ್ಣು ಕುಕ್ಕಿತಾ ಬಿಗ್ ಬಜೆಟ್ ಸಿನಿಮಾಗಳು?

Shilpa D
ಬೆಂಗಳೂರು: ಗುರುವಾರ ಬೆಳಗ್ಗೆ ಚಂದನವನದ ಹಲವು ಸ್ಟಾರ್ ಗಳ ಮನೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಹಲವು ಅನುಮಾನಗಳು ಎದುರಾಗಿವೆ, 
ದಿವಿಲನ್‌,  ಕೆಜಿಎಫ್ ಸೇರಿದಂತೆ ಇತ್ತೀಚಿನ ಹಲವು ಕನ್ನಡ ಚಿತ್ರಗಳಲ್ಲಿ ಹೂಡಿಕೆಯಾಗುತ್ತಿರುವ ಅಪಾರ ಪ್ರಮಾಣದ ಹಣ ಮತ್ತು ಹಣ ಗಳಿಕೆ ಬಗ್ಗೆ ಆಯಾ ಚಿತ್ರಗಳ ನಿರ್ಮಾಪಕರ ಹೇಳಿಕೆಗಳು, ಮಾಧ್ಯಮಗಳಲ್ಲಿನ ವರದಿಗಳನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕನ್ನಡದ ಬಿಗ್‌ ಬಜೆಟ್‌ ಚಿತ್ರಗಳ ನಿರ್ಮಾಣ ಹಾಗೂ ಬಿಡುಗಡೆ ನಂತರ ಅವುಗಳು ಹತ್ತಾರು, ನೂರಾರು ಕೋಟಿ ರು.ಗಳ ಹಣ ಗಳಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ನಾಯಕ ನಟರು ಹಾಗೂ ನಿರ್ಮಾಪಕರ ಆದಾಯ ತೆರಿಗೆ ಸಲ್ಲಿಕೆ ಕುರಿತ ಮಾಹಿತಿ ಸಂಗ್ರಹಿಸಿದ್ದಾರೆ. 
ಮೊದಲ ಬಾರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆ ಮೇಲೆ ದಾಳಿ ನಡೆಯಿತು,  ಕನ್ನಡ ಸಿನಿಮಾದ ಪ್ರಮುಖ ನಿರ್ಮಾಪಕರಾಗಿರುವ ರಾಕ್ ಲೈನ್ ವೆಂಕಟೇಶ್ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹಲವು ಸಿನಿಮಾಗಳನ್ನು ಹಂಚಿಕೆ ಮಾಡಿದ್ದಾರೆ.
ಪುನೀತ್ ಅಭಿನಯದ ನಟ ಸಾರ್ವಭೌಮ ಬಿಗ್ ಬಜೆಟ್ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ, ಈ ಸಿನಿಮಾ ಬಗ್ಗೆ ಎಲ್ಲೆಡೆ ಮಾತುಗಳು ಕೇಳಿ ಬರುತ್ತಿವೆ, ಪಿಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಪಿಆರ್ ಕೆ ಆಡಿಯೋ ಲಾಂಚ್ ಮಾಡಿದ್ದು ಮತ್ತೊಂದು ಕಾರಣವಾಗಿದೆ, 
ಇನ್ನೂ ಕಿಚ್ಚ ಸುದೀಪ್ ಅಭಿನಯದ ದಿ ವಿಲ್ಲನ್ ಸಿನಿಮಾ ಸುಮಾರು 70 ಕೋಟಿ ರು ಗಲಿಸಿದ್ದು, ಸುದೀಪ್ ಮತ್ತು ನಿರ್ಮಾಪಕ ಸಿ,ಆರ್ ಮನೋಹರ್ ಅವರ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ.  ಇನ್ನೂ ವಿಜಯ್ ಕಿರಂಗದೂರ್ ನಿರ್ಮಾಣದ ಕೆಜಿಎಫ್ ಚಾಪ್ಟರ್-1  150 ಕೋಟಿ ರು ಗಳಿಸಿದೆ, ಈ ಸಿನಿಮಾಗಾಗಿ ನಿರ್ಮಾಪಕರು 70 ಕೋಟಿ ರು ಖರ್ಚು ಮಾಡಿದ್ದಾರೆ.
ಇತ್ತೀಚಿನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಭಾರೀ ಪ್ರಮಾಣದಲ್ಲಿ ಹೆಸರು ಮಾಡುತ್ತಿದೆ.ಕೆಜಿಎಫ್ ಕೂಡ ಬ್ಲಾಕ್ ಬಸ್ಚರ್ ಸಿನಿಮಾವಾಗಿದೆ, ಚಿತ್ರರಂಗದಲ್ಲಿ ಬೇನಾಮಿ ಹಣ ಹೂಡಿಕೆ ಹೆಚ್ಚಾಗಿರಬಹುದು ಎಂಬ ಅನುಮಾನ ಬಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ, ಆದರೆ ನಾವು ಎಲ್ಲವನ್ನೂ ಕಾನೂನು ಪ್ರಕಾರವಾಗಿಯೇ ಮಾಡಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮಾ ಹರೀಶ್ ಹೇಳಿದ್ದಾರೆ.
ಜೊತೆಗೆ ಅಪಾರ ಪ್ರಮಾಣದ ಲಾಭವನ್ನೂ ಗಳಿಸುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ದಾಳಿಗಿಳಿದಿದ್ದಾರೆ ಎಂದು ತಿಳಿದು ಬಂದಿದೆ.
SCROLL FOR NEXT