ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ ಮೂಲಕ ಸದ್ದು ಮಾಡ್ತಿರುವ ಬಜಾರ್ ಸಿನಿಮಾ ಇದೇ ತಿಂಗಳು ತೆರೆಕಾಣಬೇಕಿತ್ತು. ಆದರೆ , ಬಿಡುಗಡೆ ದಿನಾಂಕವನ್ನ ಮುಂದಕ್ಕೆ ಹಾಕಿಕೊಂಡಿದೆ.
ಧನ್ ವೀರ್ ಈ ಚಿತ್ರದ ನಾಯಕನಾಗಿದ್ದು, ಇದು ಇವರ ಮೊದಲ ಸಿನಿಮಾ. ಧನ್ವೀರ್ಗೆ ನಾಯಕಿಯಾಗಿ ಅದಿತಿ ಪ್ರಭುದೇವಾ ನಟಿಸಿರುವ ಈ ಸಿನಿಮಾ ಜನವರಿ 11ನೇ ತಾರೀಖು ಬಜಾರ್ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಆ ದಿನಕ್ಕೆ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂದು ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.
ನಮ್ಮ ಸಿನಿಮಾ ಪಾರಿವಾಳಗಳ ಕುರಿತಾಗಿದ್ದು, ವನ್ಯಜೀವಿ ಮಂಡಳಿ ಈ ಸಂಬಂಧ ಚರ್ಚೆ ನಡೆಸಬೇಕಿದೆ, ಬೇರೆ ಭಾಷೆಗಳ ದೊಡ್ಡ ದೊಡ್ಡ ಬಜೆಟ್ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ, ನನಗೆ ನಿರೀಕ್ಷಿತ ಸಂಖ್ಯೆಯ ಥಿಯೇಟರ್ ಸಿಗುತ್ತಿಲ್ಲ, ಈಗಾಗಿ ನಿರ್ಮಾಪಕರು ಬಿಡುಗಡೆ ದಿನಾಂಕ ಮುಂದೂಡಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.