ಪ್ರಧಾನಿ ಮೋದಿ, ಶತ್ರುಘ್ನ ಸಿನ್ಹಾ 
ಸಿನಿಮಾ ಸುದ್ದಿ

ಪ್ರಧಾನಿ ಮೋದಿ ಪಾತ್ರಕ್ಕೆ ನಾನು ಅಥವಾ ನಸೀರುದ್ದಿನ್ ಶಾ ಸೂಕ್ತ: ಶತ್ರುಘ್ನ ಸಿನ್ಹಾ

ಪ್ರಧಾನಿ ಮೋದಿ ಪಾತ್ರಕ್ಕೆ ನಾನು ಅಥವಾ ನಸಿರುದ್ದೀನ್ ಶಾ ಸೂಕ್ತವಾಗಿತ್ತು ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.ತೆರೆ ಮೇಲೆ ಯಾರೂ ಯಾವುದೇ ಪಾತ್ರದಲ್ಲಿ ಅಭಿನಯಿಸಲು ಜಗತ್ತಿನಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಇದಕ್ಕೆ ಯಾವ ಆಕ್ಷೇಪವೂ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅನುಪಮ್ ಖೇರ್  ಡಾ. ಮನಮೋಹನ್ ಸಿಂಗ್ ಹಾಗೂ ನವಾಜುದ್ದೀನ್ ಸಿದ್ದಿಕ್ಕಿ ಬಾಳಾ ಠಾಕ್ರೆ ಪಾತ್ರದಲ್ಲಿ ಅಭಿನಯದ ನಂತರ ವಿವೇಕ್ ಓಬೇರಾಯ್  ಪ್ರಧಾನಿ ನರೇಂದ್ರ ಮೋದಿ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೋದಿ ಅವರೇ ಒಪ್ಪಿ ಈ ಚಿತ್ರ ಮಾಡಲು ಅನುಮೋದನೆ ನೀಡಿದ್ದಾರೆ ಎಂಬುದು ಕೆಲ ಮೂಲಗಳಿಂದ ತಿಳಿದುಬಂದಿದೆಯಾದರೂ ಬಿಜೆಪಿ ಇದನ್ನು ನಿರಾಕರಿಸುತ್ತದೆ.

ವಿವೇಕ್ ಓಬೇರಾಯ್  ಮೋದಿ ಪಾತ್ರದಲ್ಲಿ ಅಭಿನಯಿಸುತ್ತಿರುವ  ಬಗ್ಗೆ ಪ್ರತಿಕ್ರಿಯಿಸಿದ ಶತ್ರುಘ್ನ ಸಿನ್ಹಾ, ತೆರೆ ಮೇಲೆ ಯಾರೂ ಯಾವುದೇ ಪಾತ್ರದಲ್ಲಿ ಅಭಿನಯಿಸಲು ಜಗತ್ತಿನಲ್ಲಿ ಮುಕ್ತ  ಸ್ವಾತಂತ್ರ್ಯವಿದೆ. ಇದಕ್ಕೆ ಯಾವ ಆಕ್ಷೇಪವೂ ಇರುವುದಿಲ್ಲ. ನಾಳೆ ರಾಕಿ ಸಾವಂತ್ ಸೋನಿಯಾಗಾಂಧಿ ಪಾತ್ರ ಮಾಡಲು ನಿರ್ಧರಿಸಬಹುದು, ಯಾರು ತಡೆಯಲು ಸಾಧ್ಯ ? ಪ್ರಧಾನಿ ಮೋದಿ ಆಗಿ ವಿವೇಕ್ ಓಬೇರಾಯ್  ಏಕೆ ಮಾಡಬಾರದು ? ವಿವೇಕ್ ಓಬೇರಾಯ್ ತಂದೆ ಸುರೇಶ್ ಓಬೇರಾಯ್ ಕೂಡಾ ಪ್ರಧಾನಿ ಪಾತ್ರ ಮಾಡಬಹುದು ಎಂದು ಹೇಳಿದ್ದಾರೆ.

ಆದಾಗ್ಯೂ, ಪ್ರಧಾನಿ ಮೋದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹೆಸರುವಾಸಿಯಾಗಿದ್ದು, ಆ ಹೆಸರಿಗೆ ತಕ್ಕಂತ ನಟರು ಆ ಪಾತ್ರ ಮಾಡಬೇಕಿತ್ತು. ಪ್ರಧಾನಿ ಮೋದಿ ಪಾತ್ರಕ್ಕೆ  ನಾನು ಅಥವಾ ನಸಿರುದ್ದೀನ್ ಶಾ ಸೂಕ್ತವಾಗಿತ್ತು. ಅಮಿತಾಬ್ ಬಚ್ಚನ್ ಕೂಡಾ, ಆದರೆ, ಮೋದಿ ಪಾತ್ರ ಮಾಡಲು ಅವರು ತುಂಬಾ ಎತ್ತರದಲ್ಲಿದ್ದಾರೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ವಿವೇಕ್  ಒಬೇರಾಯ್  ಪ್ರಧಾನಿ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಕೆಟ್ಟ ದಿನ ಬಂದಿದೆ. ಮೋದಿ ಏನು ಮಾಡಿದ್ದಾರೆ. ಅವರ ಯೋಜನೆಗಳು ಯಾವ ರೀತಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದನ್ನು ನೋಡಿದ್ದೇವೆ. ಅವುಗಳೆಲ್ಲಾ ಪ್ರಧಾನಿಯಿಂದಲೇ ಅನುಮೋದನೆ ಪಡೆದಿದ್ದೇವೆಯಾ ? ಅದರ ಬಗ್ಗೆ ಗೊತ್ತಿಲ್ಲ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?