ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎನ್ ಟಿಆರ್ ಕಥಾನಾಯಕುಡು ಹೆಚ್ ಡಿ ವರ್ಷನ್ ಲೀಕ್!

ಈ ಹಿಂದೆ ರಜನಿಕಾಂತ್ ಅವರ 2.0, ಯಶ್ ಅಭಿನಯದ ಕೆಜಿಎಫ್ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಕುಖ್ಯಾತ ವೆಬ್ ಸೈಟ್ ತಮಿಳ್ ರಾಕರ್ಸ್ ಇದೀಗ ಎನ್ ಟಿಆರ್ ಕಥಾನಾಯಕುಡು ಚಿತ್ರದ ಹೆಚ್ ಡಿ ವರ್ಷನ್ ಅನ್ನೇ ಅಪ್ಲೋಡ್ ಮಾಡಿದೆ ಎಂದು ತಿಳಿದುಬಂದಿದೆ.

ಹೈದರಾಬಾದ್: ಈ ಹಿಂದೆ ರಜನಿಕಾಂತ್ ಅವರ 2.0, ಯಶ್ ಅಭಿನಯದ ಕೆಜಿಎಫ್ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದ ಕುಖ್ಯಾತ ವೆಬ್ ಸೈಟ್ ತಮಿಳ್ ರಾಕರ್ಸ್ ಇದೀಗ ಎನ್ ಟಿಆರ್ ಕಥಾನಾಯಕುಡು ಚಿತ್ರದ ಹೆಚ್ ಡಿ ವರ್ಷನ್ ಅನ್ನೇ ಅಪ್ಲೋಡ್ ಮಾಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದ್ದು, ಬಹುಕೋಟಿ ವೆಚ್ಚದ ಎನ್ ಟಿಆರ್ ಕಥಾನಾಯಕುಡು ಚಿತ್ರದ ಹೆಚ್ ಡಿ ವರ್ಷನ್ ಕಾಪಿಯನ್ನು ಅಪ್ಲೋಡ್ ಮಾಡಿದೆ. ಅಚ್ಚರಿ ಎಂದರೆ ನಿನ್ನೆಯಷ್ಟೇ ಚಿತ್ರ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಎನ್ ಟಿಆರ್ ಪಾತ್ರದಲ್ಲಿ ಅವರ ಪುತ್ರ ನಂದಮೂರಿ ಬಾಲಕೃಷ್ಣ ಮತ್ತು ಅವರ ಪತ್ನಿ ಪಾತ್ರದಲ್ಲಿ ಬಾಲಿವುಡ್ ನಟಿ ವಿದ್ಯಾಬಾಲನ್ ನಟಿಸಿದ್ದಾರೆ. ಇನ್ನು ಎನ್ ಟಿಆರ್ ಪುತ್ರ ಹರಿಕೃಷ್ಣ ಅವರ ಪಾತ್ರದಲ್ಲಿ ಹರಿಕೃಷ್ಣ ಪುತ್ರ ನಂದಮೂರಿ ಕಲ್ಯಾಣ್ ರಾಮ್ ನಟಿಸಿದ್ದಾರೆ. ಎನ್ ಟಿಆರ್ ಅವರ ಅಳಿಯ ಚಂದ್ರಬಾಬು ನಾಯ್ಡು ಪಾತ್ರದಲ್ಲಿ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ನಟಿಸಿದ್ದಾರೆ.
ಚಿತ್ರಕ್ಕೆ ನಂದಮೂರಿ ಬಾಲಕೃಷ್ಣ ಅವರೇ ಬಂಡವಾಳ ಹೂಡಿದ್ದು, ಬಹುಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳ ಅಂತರದಲ್ಲಿ ಚಿತ್ರದ ಹೆಚ್ ಡಿ ವರ್ಷನ್ ಆನ್ ಲೈನ್ ಗೆ ಅಪ್ಲೋಡ್ ಆಗಿರುವುದು ಚಿತ್ರ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಅಲ್ಲದೆ ಚಿತ್ರದ ಕಲೆಕ್ಷನ್ ಗೆ ಭಾರಿ ಹೊಡೆತ ನೀಡುವ ಸಾಧ್ಯತೆ ಕೂಡ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT