ಚಿತ್ರಮಂದಿರದ ಮುಂದೆಯೇ ಸಪ್ತಪದಿ ತುಳಿದ ರಜನಿ ಅಭಿಮಾನಿ!
ಚೆನ್ನೈ: ಸಂಕ್ರಾಂತಿ ಇನ್ನೇನು ಹತ್ತಿರದಲ್ಲೇ ಇದೆ. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಇಂದೇ ಸಂಕ್ರಾಂತಿ ಹಬ್ಬದ ಸಡಗರ ಪ್ರಾರಂಭ. ಇಂದು ಬಿಡುಗಡೆಯಾಗಿರುವ ರಜನಿ ಅಭಿನಯದ "ಪೆಟ್ಟಾ" ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಆದರೆ ವಿಷಯ ಇದಷ್ಟೇ ಅಲ್ಲ ರಜನಿಕಾಂತ್ ಅಭಿಮಾನಿಯೊಬ್ಬ ತಮಿಳುನಾಡಿನ ಚೆನ್ನೈ ನಗರದಲ್ಲಿನ ಚಿತ್ರಮಂದಿರದ ಮುಂದೆಯೇ ತಾಳಿ ಕಟ್ಟುವ ಮೂಲಕ ವಿವಾಹ ಮಾಡಿಕೊಂಡಿದ್ದು ಮೇರು ನಟನ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾನೆ.
ಅಂಬಸು, ಕಮಾಚಿ ಎಂಬ ಯುವ ಜೋಡಿ ರಜನಿ ಅಭಿಮಾನಿಗಳಾಗಿದ್ದು ರಜನಿಕಾಂತ್ ಅಭಿನಯದ ಚಿತ್ರ ಬಿಡುಗಡೆಯಾದ ಮಹೂರ್ತವೇ ತಮಗೆ ಶುಭ ಮಹೂರ್ತ ಎಂದು ಬಗೆದ ಈ ಜೋಡಿ ಚಿತ್ರಮಂದಿರದ ಎದುರೇ ಮದುವೆಯಾಗಿದೆ.
ಚೆನ್ನೈನ ಉಡ್‍ಲ್ಯಾಂಡ್ಸ್ ಥಿಯೇಟರ್ ಮುಂಭಾಗದಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದ್ದು ಅಲ್ಲೇ ಮದುವೆ ಮಂಟಪದ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಶಾಸ್ತ್ರಗಳೆಲ್ಲ ಸಂಪ್ರದಾಯದ ಅನುಸಾರ ನಡೆದವು. ಇನ್ನು ಈ ವಿವಾಹಕ್ಕೆ ರಜನಿ ಅಭಿಮಾನಿಗಳೇ ಬಂಧು, ಬಳಗವಾಗಿದ್ದರು. ಚಿತ್ರ ವೀಕ್ಷಣೆಗೆ ಬಂದವರೆಲ್ಲ ಈ ನವಜೋಡಿಗಳನ್ನು ಹರಸಿ ಆಶೀರ್ವದಿಸಿದ್ದಾರೆ.
ವಿವಾಹದ ಬಳಿಕ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಒಟ್ಟಾರೆ ರಜನಿ ಮೇಲಿನ ಅಭಿಮ್ನಾನ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿ ನಿಂತಿದೆ.
ಇನ್ನು ಅನೇಕ ಕಡೆಗಳಲ್ಲಿ ಚಿತ್ರ ವೀಕ್ಷಿಸ ಬಂದ ಚಿತ್ರಪ್ರೇಮಿಗಳಿಗೆ ಪೊಂಗಲ್, ಸಿಹಿ ವಿತರಿಸಿ ಸಂಭ್ರಮಿಸಿರುವುದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos