ರಜನಿಕಾಂತ್ 
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡದ 'ಪೆಟ್ಟಾ' ಚಿತ್ರದ ಕನ್ನಡ ಆವತರಣಿಗೆ ಬರೋದು ದೌಟು?

ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ಭಾರೀ ವಿರೋಧವಿತ್ತು. ಆದರೆ ಕನ್ನಡದ ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಇತರ...

ಡಬ್ಬಿಂಗ್ ಚಿತ್ರಗಳಿಗೆ ಕರ್ನಾಟಕದಲ್ಲಿ ಭಾರೀ ವಿರೋಧವಿತ್ತು. ಆದರೆ ಕನ್ನಡದ ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಇತರ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗುವ ಸಾಧ್ಯತೆಗಳು ಹೆಚ್ಚಿತ್ತು. ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಕನ್ನಡ ಡಬ್ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದ್ದು ಇದೀಗ ಈ ಯೋಜನೆಗೆ ಕೊಂಚ ಹಿನ್ನಡೆಯಾಗಿದೆ.
ಹೌದು, ಕರ್ನಾಟಕದಲ್ಲಿ ಪೆಟ್ಟಾ ಚಿತ್ರದ ವಿತರಣೆ ಮಾಡುತ್ತಿರುವ ಜಾಕ್ ಮಂಜು ಅವರು ಪೆಟ್ಟಾ ಚಿತ್ರದ ಕನ್ನಡದ ಅವತರಣೆಕೆಯಲ್ಲಿ ರಜನಿಕಾಂತ್ ಅವರು ಧ್ವನಿ ನೀಡಲಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಇದೀಗ ರಜನಿಕಾಂತ್ ಅವರೇ ಸ್ವತಃ ತಾವು ವಾಯ್ಸ್ ಡಬ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. 
ಸದ್ಯ ರಜನಿಕಾಂತ್ ಅವರು ಯಾವುದೇ ವಿವಾದದಲ್ಲಿ ಸಿಲುಕಿಕೊಳ್ಳಲು ಇಚ್ಛಿಸುತ್ತಿಲ್ಲ. ಡಬ್ಬಿಂಗ್ ಗೆ ಕನ್ನಡಿಗರ ವಿರೋಧವಿದೆ. ಇದರಿಂದಾಗಿ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡುವ ಯೋಚನೆ ಸಹ ನಾನು ಮಾಡುವುದಿಲ್ಲ. ಇನ್ನು ವಾಯ್ಸ್ ಡಬ್ ಮಾಡುವಂತೆ ನನ್ನನ್ನು ಬಲವಂತ ಮಾಡಬೇಡಿ ಎಂದು ವಿತರಕರಿಗೆ ಖಡಕ್ಕಾಗಿ ಹೇಳಿದ್ದಾರೆ. 
ಇದರಿಂದಾಗಿ ಪೆಟ್ಟಾ ಕನ್ನಡ ಆವತರಣಿಕೆಯ ಚಿತ್ರ ಬಿಡುಗಡೆಯಾಗುವ ಸಂಭವಗಳು ಕಡಿಮೆ ಇದೆ. ಇನ್ನು ವಿತರಕ ಜಾಕ್ ಮಂಜು ಸಹ ಪೆಟ್ಟಾ ಡಬ್ಬಿಂಗ್ ಕುರಿತಂತೆ ಸಂಕ್ರಾಂತಿ ಹಬ್ಬದ ನಂತರ ನಿರ್ಮಾಪಕ ಜೊತೆ ಮಾತನಾಡುತ್ತೇನೆ. ಅಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT