ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ 
ಸಿನಿಮಾ ಸುದ್ದಿ

ತೆಲುಗು ನಟಿ ಅನಿಶಾ ರೆಡ್ಡಿ ಜೊತೆ ನಟ ವಿಶಾಲ್ ಮದುವೆ

ಟಾಲಿವುಡ್ ನಟ ನಟಿಯರಾದ ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ ಸದ್ಯದಲ್ಲಿಯೇ ಸತಿಪತಿ...

ಟಾಲಿವುಡ್ ನಟ ನಟಿಯರಾದ ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ ಸದ್ಯದಲ್ಲಿಯೇ ಸತಿಪತಿಗಳಾಗಲಿದ್ದಾರೆ. ಈ ವಿಷಯವನ್ನು ಸ್ವತಃ ನಟಿ ಅನಿಶಾ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಘೋಷಿಸಿಕೊಂಡಿದ್ದಾರೆ.

ಪೆಲ್ಲಿಚೊಪ್ಪುಲು ಮತ್ತು ಅರ್ಜುನ್ ರೆಡ್ಡಿ ಸಿನಿಮಾಗಳಲ್ಲಿ ಅನಿಶಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.

ನಟ ವಿಶಾಲ್ ವರಲಕ್ಷ್ಮಿ ಶರತ್ ಕುಮಾರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಅದು ಸುಳ್ಳು ವದಂತಿ ಎಂದು ಇಬ್ಬರೂ ಖಚಿತಪಡಿಸಿದ್ದರು. ಹೈದರಾಬಾದಿನ ಉದ್ಯಮಿಯ ಪುತ್ರಿಯನ್ನು ತಮ್ಮ ಮಗ ಮದುವೆಯಾಗಲಿದ್ದಾರೆ ಎಂದು ವಿಶಾಲ್ ತಂದೆ ಜಿ ಕೆ ರೆಡ್ಡಿ ಈ ಹಿಂದೆ ಹೇಳಿದ್ದರು.

ವಿಶಾಲ್ ಕಳೆದ ವರ್ಷ ಇರುಂಬು ತಿರೈ ಮತ್ತು ಸಂದಕೋಜ್ಹಿ 2 ಸಿನಿಮಾಗಳಲ್ಲಿ ನಟಿಸಿದ್ದರು. ಈ ವರ್ಷ ರಾಶಿ ಖನ್ನಾ ಜೊತೆ ಅಯೋಗ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರ ಜೂನಿಯರ್ ಎನ್ ಟಿಆರ್ ನಟಿಸಿದ್ದ ಟೆಂಪರ್ ಚಿತ್ರದ ರಿಮೇಕ್ ಆಗಿದೆ.

ಯಶ್ ಅಭಿನಯದ ಕೆಜಿಎಫ್ ಚಿತ್ರದ ತಮಿಳು ಅವತರಣಿಕೆಗೆ ವಿಶಾಲ್ ಹಂಚಿಕೆದಾರರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌