ಭಾರತ ಕೇಂದ್ರಿತ, ಋತುಸ್ರಾವದ ಕುರಿತ ಸಿನಿಮಾ ಆಸ್ಕರ್ ಗೆ ನಾಮನಿರ್ದೇಶನ
ಭಾರತ ಕೇಂದ್ರಿತ, ಋತುಸ್ರಾವದ ಕುರಿತಾದ ಸಿನಿಮಾ, "ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್" ಎಂಬ ಸಿನಿಮಾ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ.
ಲಾಸ್ ಏಂಜಲೀಸ್: ಭಾರತ ಕೇಂದ್ರಿತ, ಋತುಸ್ರಾವದ ಕುರಿತಾದ ಸಿನಿಮಾ, "ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್" ಎಂಬ ಸಿನಿಮಾ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ.
ಆಸ್ಕರ್ ಗೆ ನಾಮನಿರ್ದೇಶನಗೊಂಡಿರುವ ಸಿನಿಮಾಗಳ ಪಟ್ಟಿ ಜ.22 ರಂದು ಘೋಷಣೆಯಾಗಿದ್ದು ಶಾರ್ಟ್ ಸಬ್ಜೆಕ್ಟ್ ವಿಭಾಗದಲ್ಲಿ ಆಯ್ಕೆಯಾಗಿರುವ ಟಾಪ್ 5 ಸಿನಿಮಾಗಳ ಪಟ್ಟಿಯಲ್ಲಿ ಪೀರ್ಯಡ್ ಎಂಡ್ ಆಫ್ ಸೆಂಟೆನ್ಸ್ ಸಿನಿಮಾ ಸ್ಥಾನ ಪಡೆದಿದೆ. ಗುಣೀತ್ ಮೊಂಗಾ ನಿರ್ಮಾಣ ಮಾಡಿದ್ದು,, ಮೋಂಗಾಸ್ ಎಂಟರ್ಟೈನ್ಮೆಂಟ್ ಸಹ ನಿರ್ಮಾಣವಿದೆ.
ಸಿನಿಮಾ ಆಯ್ಕೆ ಮಾಡಿರುವ ಬಗ್ಗೆ ಮಾತನಾಡಿರುವ ಮೊಂಗಾ ನಮ್ಮ ನಿರೀಕ್ಷೆಗೂ ಮೀರಿದ್ದು ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತೀಯ ಮಹಿಳೆಯರು ಋತುಸ್ರಾವದ ಬಗ್ಗೆ ಸಾಮಾಜಿಕ ದೃಷ್ಟಿಕೋನದ ಕುರಿತಾಗಿದ್ದು, ನಿಜ ಜೀವನದಲ್ಲಿ ಪ್ಯಾಡ್ ಮ್ಯಾನ್ ಅರುಣಾಚಲಂ ಮುರುಗನಾಥನ್ ಬಗ್ಗೆಯೂ ಡಾಕ್ಯುಮೆಂಟರಿಯಲ್ಲಿ ತಿಳಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.