ಧ್ರುವ ಸರ್ಜಾ ಹಾಗೂ ರಶ್ಮಿಕಾ ನಟಿಸರುವ ಪೊಗರು ಸಿನಿಮಾವನ್ನು ನಂದ ಕಿಶೋರ್ ನಿರ್ದೇಶಿಸುತ್ತಿದ್ದು, ಫ್ರೆಬ್ರವರಿ 4 ರಿಂದ ಚಿತ್ರೀಕರಣವ ಆರಂಭವಾಗಲಿದೆ.
ಬಿಕೆ ಗಂಗಾಧರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಸಿನಿಮಾ ಶೂಟಿಂಗ್ ಗಾಗಿ ಕಳೆದು ವರ್ಷದಲ್ಲಿ ಸಿನಿಮಾಗೋಸ್ಕರ್ ಧ್ಪವ 30 ಕೆಜಿ ತೂಕ ಕಳೆದುಕೊಂಡಿದ್ದಾರೆ, ಶಾಲಾ ವಿದ್ಯಾರ್ಥಿ ಪಾತ್ರದ ಶೂಟಿಂಗ್ ಪೂರ್ಣಗೊಂಡಿದೆ.
ರವಿಶಂಕರ್ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಧೃವ ಸರ್ಜಾ ಇಲ್ಲಿಯವರೆಗೆ ಭಾಗವಹಿಸಿರಲಿಲ್ಲ,
ಸದ್ಯ ಚಿತ್ರತಂಡ ಧೃವ ಸರ್ಜಾ ಮತ್ತು ರಶ್ಮಿಕಾ ಭಾಗದ ಸನ್ನಿವೇಶಗಳನ್ನು ಶೂಟಿಂಗ್ ಮಾಡಲು ನಿರ್ಧರಿಸಿದ್ದು, 35 ದಿನಗಳ ಕಾಲದ ಶೂಟಿಂಗ್ ಗೆ ತಯಾರಿ ನಡೆಸಿದೆ, ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕುತ್ತಿದೆ,