ಯಶ್ 'ಕೆಜಿಎಫ್ 2' ತೆರೆಗೆ ಬರೋದು ಯಾವಾಗ? 'ರಾಕಿ ಬಾಯ್' ನಿಡಿದ ಉತ್ತರ ಇಲ್ಲಿದೆ 
ಸಿನಿಮಾ ಸುದ್ದಿ

ಯಶ್ 'ಕೆಜಿಎಫ್ 2' ತೆರೆಗೆ ಬರೋದು ಯಾವಾಗ? 'ರಾಕಿ ಬಾಯ್' ಕೊಟ್ಟ ಉತ್ತರ ಇಲ್ಲಿದೆ

ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದ "ಕೆಜಿಎಫ್" ಬಳಿಕ ಸಹ ರಾಕಿ ಬಾಯ್ ಯಶ್ ಸಾಕಷ್ಟು ಬ್ಯುಸಿ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ "ಕೆಜಿಎಫ್ 2"....

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದ "ಕೆಜಿಎಫ್" ಬಳಿಕ ಸಹ ರಾಕಿ ಬಾಯ್ ಯಶ್ ಸಾಕಷ್ಟು ಬ್ಯುಸಿ ಆಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ "ಕೆಜಿಎಫ್ 2" ಮತ್ತು ಅನಿಲ್ ಕುಮಾರ್ ನಿರ್ದೇಶನದ "ಮೈ ನೇಮ್ ಈಸ್ ಕಿರಾತಕ" ಚಿತ್ರಗಳು ಅವರ ಕೈಲಿದೆ. ಇದೀಗ ಯಶ್ ಮೊದಲು "ಕೆಜಿಎಫ್ 2"  ಜುಗಿಸಿ ಬಳಿಕ "....ಕಿರಾತಕ" ಚಿತ್ರೀಕರಣದಲ್ಲಿ ತೊಡಗಲು ನಿರ್ಧರಿಸಿದ್ದಾರೆ.
ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಈ ಚಿತ್ರ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿದೆ. ಇದು ಯಶ್ ಮೇಲೆ ಒತ್ತಡ ಹೆಚ್ಚಿಸಿದೆ ಎನ್ನಲಾಗಿದೆ. ಅಲ್ಲದೆ ಯಶ್ ಸಹ ರಾಷ್ಟ್ರ ಮಟ್ಟದಲ್ಲಿ ಹೊಸ ಮುಖವಾಗಿರುವ ಕಾರಣ ಇತರೆ ಭಾಷಾ ನಾಯಕರ ಜತೆ ಸ್ಪರ್ಧೆಗಿಳಿಯಲು ಹಾಗೂ ಯಶವಿಯಾಗಲ್ಕು ನೋಡುತ್ತಿದ್ದಾರೆ. ಇದೆಲ್ಲಾ ಲೆಕ್ಕಾಚಾರಗಳಿಡ್ಂಆಗಿ ಕೆಜಿಎಫ್ 2 ಬೆರೆ ಚಿತ್ರಗಳಿಗಿಂತ ನಾಲ್ಕು ಪಟ್ಟು ದೊಡ್ಡದಿದೆ.
"ನಾನು ಕೆಜಿಎಎಫ್ ಪ್ರಚಾರಕ್ಕಾಗಿ ತೆರಳುವ ಮುನ್ನವೇ ಕಿರಾತಕಕ್ಕಾಗಿನ 40 ಶೇ. ಶೂಟಿಂಗ್ ಮುಗಿಸಿದ್ದೆ.ಕೆಜಿಎಫ್ ಗೆ ಅತ್ಯುತ್ತಮ ಪ್ರತಿಕ್ರಿಯೆ ಬಂದ ಕಾರಣ  ಕೆಜಿಎಫ್ 2 ಕುರಿತು ಮಹತ್ವ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹೀಘಾಗಿ ನಾನು ಈ ಚಿತ್ರದ ಶೂಟಿಂಗ್ ಗೆ ಮೊದಲ ಆದ್ಯತೆ ನೀಡಿದ್ದೇನೆ. ಶೂಟಿಂಗ್ ವಿಳಂಬವಾದರೆ ಚಿತ್ರ ಬಿಡುಗಡೆಯ ವಿಳಂಬವಾಗಲಿದೆ.ನಿರ್ಮಾಪಕರು ಚಿತ್ರವನ್ನು 2020ರಲ್ಲಿ ಬಿಡುಗಡೆಗೊಳಿಸಲು ಆಲೋಚಿಸಿದ್ದಾರೆ. ಹಿಗಾಗಿ ಗಿ, ಚಿತ್ರೀಕರಣ ಪೂರ್ಣಗೊಳಿಸಿ ಕೊಟ್ಟು ಅವರಿಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಸಮಯ ನೀಡಬೇಕಾಗಿದೆ." ಯಶ್ ಹೇಳಿದ್ದಾರೆ.
"ಕಿರಾತಕ ಚಿತ್ರಕ್ಕಾಗಿ ನಾನು ಗಡ್ಡವನ್ನು ತೆಗೆಯಬೇಕಿದೆ.ನಾನು ಕೆಜಿಎಫ್ ಗೆ ಮೊದಲ ಆದ್ಯತೆ ನಿಡಲು ಇದೂ ಸಹ ಒಂದು ಕಾರಣ.ಕಳೆದ ಮೂರುವರೆ ತಿಂಗಳಿನಿಂದ ನಾನು ಗಡ್ಡ ಬೆಳೆಸುತ್ತಿದ್ದು ಇನ್ನೆರಡು ತಿಂಗಳಲ್ಲಿ ಪ್ರಶಂತ್ ತಮ್ಮ ಚಿತ್ರಕ್ಕಾಗಿ ನನ್ನ ಡೇಟ್ಸ್ ಕೇಳಿದ್ದಾರೆ.ನಾನು ಈಗ ನನ್ನ ಗಡ್ಡ ತೆಗೆದದ್ದಾದರೆ ಅದು ಚಿತ್ರದ ವಿಳಂಬಕ್ಕೆ ಕಾರಣವಾಗಲಿದೆ."
ಯಶ್  ಮುಂದಿನ ಮೇ ತಿಂಗಳಿನಿಂದ ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.ಯಶ್ ಅವರ ಕೆಜಿಎಫ್ ಮೊದಲ ಕಂತು ಕಳೆದ ವರ್ಷ ಡಿಸೆಂಬರ್ ನಲ್ಲಿ ತೆರೆಕಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT