ಸಿನಿಮಾ ಸುದ್ದಿ

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ 'ಫೈರ್' ವಿಡಿಯೋ ಸಾಂಗ್!

Vishwanath S
ಬೆಂಗಳೂರು: ಮೂರೇ ಮೂರು ಪೆಗ್ಗಿಗೆ ಅಂತ ಹಾಡಿ ಕನ್ನಡದ ಯುವಜನತೆಗೆ ಹುಚ್ಚು ಹಿಡಿಸಿದ್ದ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ಫೈರ್ ಹಾಡು ಎಲ್ಲ ಕಡೆ ಸಖತ್ ಸೌಂಡ್ ಮಾಡುತ್ತಿದ್ದು ಈಗಾಗಲೇ ಯೂಟ್ಯೂಬ್ ನಲ್ಲಿ ಟ್ರೇಡಿಂಗ್ ಆಗಿದ್ದು 2ನೇ ಸ್ಥಾನದಲ್ಲಿದೆ. 
ಹಚ್ಚ ಬನ್ನಿ ಫೈರ್ ಎಂದು ಚಂದನ್ ಶೆಟ್ಟಿ ಆಡಿರುವ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಫೈರ್ ವಿಡಿಯೋ ಹಾಡು ಅದ್ಭುತವಾಗಿ ಮೂಡಿಬಂದಿದ್ದು ಸುರೇಶ್ ಕುಡುವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಅಂತೆಯೆ ಫೈರ್ ನಲ್ಲಿ ಚಂದನ್ ಶೆಟ್ಟಿ ಕನ್ನಡವನ್ನು ಹಾಡಿ ಹೊಗಳಿದ್ದು ನಾನಾ ದೇಶದಲ್ಲಿರುವ ಕನ್ನಡಿಗರನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. 
SCROLL FOR NEXT