ಸಿನಿಮಾ ಸುದ್ದಿ

ಆದಿಲಕ್ಷ್ಮಿ ಪುರಾಣ - ಸಾಮಾಜಿಕ ಕಳಕಳಿ ಹೊಂದಿರುವ ಪ್ರೇಮಕಾವ್ಯ

Raghavendra Adiga
ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಬಹುನಿರೀಕ್ಷಿತ ಚಿತ್ರ "ಆದಿಲಕ್ಷ್ಮಿ ಪುರಾಣ" ಇದೇ ಜುಲೈ 19ಕ್ಕೆ ತೆರೆಗೆ ಬರಲು ಸಿದ್ದವಾಗಿದೆ. ಈ ನಡುವೆ ನಿರ್ದೇಶಕಿ ವಿ. ಪ್ರಿಯಾ ತಮ್ಮ ಈ ಚಿತ್ರ ಪ್ರಸಕ್ತ ಸಾಮಾಜಿಕ ಸಮಸ್ಯೆಗಳ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ."ನಗರ ಪ್ರದೇಶದ ಯುವಜನತೆಯಲ್ಲಿ ಮಾದಕವಸ್ತುಗಳ ಚಟ ತೀವ್ರವಾಗಿದೆ. ಈ ಸಮಸ್ಯೆಯ ಬಗೆಗೆ ನಮ್ಮ ಚಿತ್ರದಲ್ಲಿ ಉತ್ತಮ ಸಂದೇಶವೊಂದನ್ನು ನೀಡಲಾಗಿದೆ" ನಿರ್ದೇಶಕಿ ಹೇಳಿದ್ದಾರೆ.
"ಪೋಲೀಸ್ ಪಾತ್ರಧಾರಿಯಾಗಿರುವ ನಿರೂಪ್ ಭಂಡಾರಿ ಈ ಚಿತ್ರದಲ್ಲಿ ಮಾದಕವಸ್ತುಗಳ ದುಷ್ಪರಿಣಾಮಗಳ ವಿರುದ್ಧ ಹೋರಾಡುವ ದೃಶ್ಯಗಳಿದೆ"
ರಾಕ್ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರ ಪ್ರಿಯಾ ಅವರ ಪಾಲಿಗೆ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.ಮ್ಯ ಜಗನ್ಮೂರ್ತಿ, ಜೋ ಸೈಮನ್, ಯಶ್ವಂತ್ ಶೆಟ್ಟಿ, ಮತ್ತು ಭರತ್ ಕಲ್ಯಾಣ್ ಸಹ ಅಭಿನಯಿಸಿದ್ದು ಆದಿ ಲಕ್ಷ್ಮಿ ಪುರಾಣವು ಪ್ರೀಥಾ ಜಯರಾಮ್ ಛಾಯಾಗ್ರಹಣ, ಅನೂಪ್ ಭಂಡಾರಿ ಹಿನ್ನೆಲೆ ಸಂಗೀತವನ್ನು ಹೊಂದಿದೆ. 
SCROLL FOR NEXT