ಸಿನಿಮಾ ಸುದ್ದಿ

‘ಟಿಕ್ ಟಾಕ್’ ಲೋಕಕ್ಕೆ ಲಗ್ಗೆ ಇಟ್ಟ ಕಿರಿಕ್ ಬೆಡಗಿ ರಶ್ಮಿಕಾ

Raghavendra Adiga
‘ಟಿಕ್ ಟಾಕ್’  ಪ್ರಿಯರಿಗೆ ಖುಷಿಯ ಸುದ್ದಿ! ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಈಗ ‘ಟಿಕ್ ಟಾಕ್’ ಲೋಕಕ್ಕೆ ಪ್ರವೇಶಿಸಿದ್ದಾರೆ.
‘ಟಿಕ್ ಟಾಕ್’ ನ ಹೊಸ ಖಾತೆ ತೆರೆದಿರುವ ನಟಿ ತಮ್ಮ ಮುಂಬರುವ ಚಿತ್ರ ‘ಡಿಯರ್ ಕಾಮ್ರೆಡ್’ ಬಗೆಗೆ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇಷ್ಟೂ ದಿನ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಮೂಲಕ ಅಭಿಮಾನಿಗಳೊಡನೆ ಸಂಪರ್ಕದಲ್ಲಿದ್ದ ನಟಿ ರಶ್ಮಿಕಾ ಈಗ ಟಿಕ್ ಟಾಕ್’  ಗೆ ಲಗ್ಗೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಡಬಲ್ ಖುಷಿ ತಂದಿದೆ.
ರಶ್ಮಿಕಾ-ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಡಿಯರ್ ಕಾಮ್ರೆಡ್’ ಇದೇ ಜುಲೈ 26ಕ್ಕೆ ತೆರೆ ಕಾಣಲಿದೆ.ಈ ಸಂಬಂಧ ‘ಟಿಕ್ ಟಾಕ್’  ವೀಡಿಯೋ ಮಾಡಿರುವ ನಟಿ "ಇದು ನನ್ನ ‘ಟಿಕ್ ಟಾಕ್’  ಹ್ಯಾಂಡಲ್, ನನ್ನ ಡಿಯರ್ ಕಾಮ್ರೆಡ್’ ಚಿತ್ರದ ಎಲ್ಲಾ ಅಪ್ ಡೇಟ್ ಗಳಿಗಾಗಿ ಇಲ್ಲಿ ಫಾಲೋ ಮಾಡಿ. ಇಲ್ಲಿಯೂ ನನ್ನನ್ನು ಪ್ರೋತ್ಸಾಹಿಸಿ " ಎಂದು ಅಭಿಮಾನಿಗಳಲ್ಲಿ ಅರಿಕೆ ಮಾಡಿಕೊಂಡಿದ್ದಾರೆ. ಆದರೆ ವೀಡಿಯೋದಲ್ಲಿ ರಶ್ಮಿಕಾ ಇಂಗ್ಲೀಷ್ ನಲ್ಲಷ್ಟೇ ಮಾತನಾಡಿದ್ದು ಕನ್ನಡಿಗರಿಗೆ ಬೇಸರ, ಆಕ್ರೋಶ ಮೂಡುವಂತೆ ಮಾಡಿದೆ.
SCROLL FOR NEXT