ಸಿನಿಮಾ ಸುದ್ದಿ

ಮಹಿಳೆಯರನ್ನು ಅವರ ಪ್ರತಿಭೆಯಿಂದಾಗಿ ಆಯ್ಕೆ ಮಾಡಲಾಗಿದೆ: ನಿರೂಪ್ ಭಂಡಾರಿ

Lingaraj Badiger
ರಂಗಿ ತರಂಗ ಚಿತ್ರದ ಖ್ಯಾತಿಯ ನಟ ನಿರೂಪ್ ಭಂಡಾರಿ ಅಭಿಯನದ ಮೂರನೇ ಚಿತ್ರ ಆದಿಲಕ್ಷ್ಮಿ ಪುರಾಣ ನಾಳೆ ತೆರೆಗೆ ಬರುತ್ತಿದ್ದು, ಅವರ ಹಿಂದಿನ ಎರಡು ಚಿತ್ರಗಳಾದ 'ರಂಗಿ ತರಂಗ' ಹಾಗೂ 'ರಾಜರಾಥ'ವನ್ನು ನಿರೂಪ್ ಸಹೋದರ ಅನೂಪ್ ಭಂಡಾರಿ ಅವರು ನಿರ್ದೇಶಿಸಿದ್ದರು.
ಇನ್ನು ನಿರೂಪ್ ಭಂಡಾರಿ ಹಾಗೂ ರಾಧಿಕಾ ಪಂಡಿತ್ ಅಭಿನಯಂದ 'ಆದಿಲಕ್ಷ್ಮಿ ಪುರಾಣ'ವನ್ನು ವಿ ಪ್ರಿಯಾ ಅವರು ನಿರ್ದೇಶಿಸಿದ್ದಾರೆ.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ನಿರೂಪ್ ಭಂಡಾರಿ ಅವರು, ಹೌದು, ನನ್ನ ಸಹೋದರ ಮತ್ತು ಎರಡು ಚಿತ್ರಗಳ ಕಾರ್ಯಕಾರಿ ನಿರ್ಮಾಪಕರಾಗಿರುವ ತಂದೆ ಸೆಟ್ ನಲ್ಲಿದ್ದಾರೆ. ನಾನು ಏನಾದರೂ ತಪ್ಪು ಮಾಡಿದರೆ ಅನೂಪ್ ಹೇಳುತ್ತಾರೆ. ಅಂತೆಯೇ, ನನಗೆ ಅಗತ್ಯವಿದ್ದರೆ ಇನ್ನೂ ಒಂದು ಟೇಕ್ ಕೇಳುವ ಸ್ವಾತಂತ್ರ್ಯವಿರುತ್ತದೆ ಎಂದಿದ್ದಾರೆ.
ನಾನು ಈ ಬಾರಿ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ. ವಿ ಪ್ರಿಯಾ ನಿನ್ನೆ ತನಕ ಅಪರಿಚಿತರಾಗಿದ್ದರು. ಆದರೆ ಇಂದು ನಾವು ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ ಎಂದು ನಿರೂಪ್ ಹೇಳಿದ್ದಾರೆ.
ಪ್ರಿಯಾ ತನ್ನ ಕೆಲಸದ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾಳೆ. ಅವಳೊಂದಿಗಿನ ವಿವಿಧ ಸಭೆಗಳು ನನಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿದವು ಎಂದು ನಿರೂಪ್ ನೆನಪಿಸಿಕೊಂಡರು.
ಈ ಚಿತ್ರದ ನಿರ್ದೇಶಕರು ಮಾತ್ರ ಮಹಿಳೆ ಅಲ್ಲ. ನಟಿ, ಸಹಾಯಕ ನಿರ್ದೇಶಕರು ಹಾಗೂ ಸೌಂಡ್ ಇಂಜಿನಿಯರ್ ಸೇರಿದಂತೆ  ಸೆಟ್ ನಲ್ಲಿ ಹಲವು ಮಹಿಳೆಯರಿದ್ದರು. ಆದರೆ ಅವರಲ್ಲಿ ಯಾರನ್ನೂ ಮಹಿಳೆ ಎಂಬ ಕಾರಣಕ್ಕೆ ಆಯ್ಕೆ ಮಾಡಿಲ್ಲ. ಅವರ ಪ್ರತಿಭೆಯಿಂದಾಗಿ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ರಾಕ್‌ ಲೈನ್ ನಿರ್ಮಾಣದ 'ಆದಿಲಕ್ಷ್ಮಿ ಪುರಾಣ' ಚಿತ್ರವನ್ನು ಕಾಮಿಡಿ ಟಚ್ ಮೂಲಕ ನಿರೂಪಣೆ ಮಾಡಲಾಗಿದೆ ಎಂದು ನಿರೂಪ್ ಭಂಡಾರಿ ತಿಳಿಸಿದ್ದಾರೆ.
SCROLL FOR NEXT