ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಯಶ್ ಗೆ ಆ್ಯಕ್ಟಿಂಗ್ ಹೇಳಿಕೊಟ್ಟಿದ್ದೇ....; ತೆಲುಗು ನಟ ಆಕಾಶ್ ಶಾಕಿಂಗ್ ಹೇಳಿಕೆ!

ರಾಕಿಂಗ್ ಸ್ಟಾರ್ ಯಶ್ ಅವರ ಕುರಿತಂತೆ ಖ್ಯಾತ ತೆಲುಗು ನಟ ಜೈ ಆಕಾಶ್ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅವರ ಕುರಿತಂತೆ ಖ್ಯಾತ ತೆಲುಗು ನಟ ಜೈ ಆಕಾಶ್ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಈ ಹಿಂದೆ ತೆಲುಗಿನಲ್ಲಿ ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಚಿತ್ರಕಥೆ ತನ್ನದು ಎಂದು ಹೇಳಿಕೊಂಡು ಭಾರಿ ಸುದ್ದಿ ಮಾಡಿದ್ದ ಜೈ ಆಕಾಶ್ ಈಗ ಮತ್ತೆ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದರ ಸಂದರ್ಶನದಲ್ಲಿ ಮಾತನಾಡಿರುವ ನಟ ಜೈ ಆಕಾಶ್, ತಮಗೆ ಯಾವುದೇ ನಿರ್ದೇಶಕ ಅವಕಾಶ ನೀಡುತ್ತಿಲ್ಲ. ಬೇಕೆಂದೇ ತಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ. ಈಗ ಕೆಜಿಎಫ್ ಮೂಲಕ ಸದ್ದು ಮಾಡಿರುವ ನಟ ಯಶ್ ಗೆ ನಟನೆ ಹೇಳಿಕೊಟ್ಟಿದ್ದೇ ನಾನು ಎಂಬರ್ಥದಲ್ಲಿ ಹೇಳಿಕೆ ನೀಡಿ ನಟ ಜೈ ಆಕಾಶ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂತೆಯೇ ಈಗಲೂ ನಾನು ಸಂಭಾವನೆ ಇಲ್ಲದೇ ನಟಿಸಲು ಸಿದ್ಧ. ಆದರೆ ಉತ್ತಮ ನಿರ್ದೇಶಕ ಮತ್ತು ನಿರ್ಮಾಪಕರು ಬೇಕು. ನನ್ನ ಕೆಲ ಚಿತ್ರಗಳನ್ನು ಬೇಕೆಂದೇ ಕೆಲವರು ತೆರೆಕಾಣದಂತೆ ಮಾಡಿದ್ದಾರೆ ಎಂದು ನಟ ಜೈ ಆಕಾಶ್ ಆರೋಪಿಸಿದ್ದಾರೆ.
ಇನ್ನು ನಟ ಜೈ ಆಕಾಶ್ ಈ ಹಿಂದೆ 2007ರಲ್ಲಿ ನಟಿ ಪ್ರಿಯಾ ಹಾಸನ್ ನಿರ್ದೇಶಿಸಿ ನಟಿಸಿದ್ದ ಜಂಭದ ಹುಡುಗಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದಲ್ಲಿ ಸಹಾಯಕ ಪಾತ್ರದಲ್ಲಿ ನಟ ಯಶ್ ಕೂಡ ಅಭಿನಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ: ದೇವರ ಹೆಸರಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಪ್ರಮಾಣವಚನ ಸ್ವೀಕಾರ..!

'Lack Of Knowledge': ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಡಚ್ ಪ್ರಧಾನಿ ಹೇಳಿಕೆ ತಿರಸ್ಕರಿಸಿದ ಭಾರತ!

COVID ಬಳಿಕ ವಿಶ್ವಕ್ಕೆ ಮತ್ತೊಂದು ಹೆಮ್ಮಾರಿ ಕಂಟಕ: ಕೆನಡಾದಲ್ಲಿ ಮಾರಣಾಂತಿಕ 'Hantavirus' ಮತ್ತೊಂದು ಸೋಂಕು ದೃಢ, ಹೆಚ್ಚಿದ ಆತಂಕ..!

ಅಧಿಕಾರ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್: CM ಗಾದಿ ಕನಸು ಜೀವಂತ..!

94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಕೇವಲ 1 ರೂ.ಗೆ ಭೋಜನ ವ್ಯವಸ್ಥೆ..!

SCROLL FOR NEXT