ಆದಿಲಕ್ಷ್ಮಿ ಪುರಾಣದಲ್ಲಿ ನಿರೂಪ್ ಹಾಗೂ ರಾಧಿಕಾ
ವರ್ಷಗಳ ನಂತರ ಸ್ಯಾಂಡಲ್ ವುಡ್ ಕ್ಯೂಟ್ ನಟಿ ರಾಧಿಕಾ ಪಂಡಿತ್ ಮತ್ತೆ ಬೆಳ್ಳಿ ತೆರೆ ಮೇಲೆ ಮಿಂಚಲು ತಯಾರಾಗುತ್ತಿದ್ದಾರೆ.ವಿ ಪ್ರಿಯಾ ನಿರ್ದೇಶನದ, ರಾಧಿಕಾ ಅಭಿನಯದ "ಆದಿಲಕ್ಷ್ಮಿ ಪುರಾಣ" ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ.
ನಿರೂಪ್ ಭಂಡಾರಿ, ರಾಧಿಕಾ ಜತೆಯಾಗಿ ನಟಿಸಿರುವ ಈ ಚಿತ್ರ ಜುಲೈ 19 ರಂದು ತೆರೆ ಕಾಣಲಿದೆ.ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇದಾಗಲೇ ಯು/ಎ ಪ್ರಮಾಣಪತ್ರ ನೀಡಿದೆ. ಆದರೆ ಇದೀಗ ವಿಶ್ವಕಪ್ ಕ್ರಿಕೆಟ್ ನಡೆಯುತ್ತಿರುವ ಕಾರಣ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಆಗಮಿಸುವುದು ಅನುಮಾನವಿದ್ದ ಕಾರಣ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಸುಹಾಸಿನಿ ಒಡನಾಡಿಯಾಗಿರುವ ಪ್ರಿಯಾ ತಮಿಳಿನಲ್ಲಿ "ಕಂಡ ನಾಲ್ ಮುದಲ್", "ಕಣ್ಣಮೂಚಿ ಯೇನಂಡ" ದಂತಹಾ ಚಿಒತ್ರಗಳಲ್ಲಿ ತಮ್ಮ ಛಾಪು ಮೂಡಿಸಿಸಿದ್ದಾರೆ.
ಇನ್ನು ನಿರೂಪ್ ಭಂಡಾರಿ ರೆಬೆಲ್ ಪುತ್ರ ಅಭಿಷೇಕ್ ಅವರ "ಅಮರ್" ನಲ್ಲಿ ಕಾಣಿಸಿಕೊಂಡಿದ್ದರೆ ರಾಧಿಕಾ ಪಂಡಿತ್ ಯಶ್ ಜೋಡಿಯಾಗಿ "ಸಂತು ಸ್ಟ್ರೈಟ್ ಫಾರ್ವರ್ಡ್" ಚಿತ್ರದಲ್ಲಿ ಕಾಣಿಸಿಕೊಂಡಿರುವುದೇ ಕೊನೆ.
"ಆದಿಲಕ್ಷ್ಮಿ ಪುರಾಣ" ದಲ್ಲಿ ರಾಧಿಕಾ, ನಿರೂಪ್ ಮಾತ್ರವಲ್ಲದೆಸೌಮ್ಯ ಜಗನ್ಮೂರ್ತಿ ಜೋಸೈಮನ್, ಯಶ್ವಂತ್ ಶೆಟ್ಟಿ, ಭರತ್ ಕಲ್ಯಾಣ್ ಇನ್ನೂ ಮೊದಲಾದ ರಂಗಕಲಾವಿದರೂ ಇದ್ದಾರೆ.ಪ್ರಶಾಂತ್ ರಾಜಪ್ಪ ಚಿತ್ರದ ಸಂಭಾಷಣೆ ಬರೆದಿದ್ದರೆ ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಿದ್ದಾರೆ.ಅನೂಪ್ ಭಂಡಾರಿ ಚಿತ್ರದ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos