ಸೂರ್ಯವಂಶ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ರಿಲೀಸ್ ಆಗಿ 20 ವರ್ಷ: ಬರಲಿದೆಯೇ ಸೂರ್ಯವಂಶ-2; ನಿರ್ದೇಶಕ ನಾರಾಯಣ್ ಹೇಳಿದ್ದೇನು?

ಡಾ.ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ 2000 ಇಸವಿ ಜೂನ್ 15ರಂದು ರಿಲೀಸ್ ಆಗಿತ್ತು, ಅಂದರೆ ಇಂದಿಗೆ ಸುಮಾರು 20 ವರ್ಷ. ನಿರ್ದೇಶಕ ಎಸ್.ನಾರಾಯಣ್ ...

ಡಾ.ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾ 2000 ಇಸವಿ ಜೂನ್ 15ರಂದು ರಿಲೀಸ್ ಆಗಿತ್ತು, ಅಂದರೆ ಇಂದಿಗೆ ಸುಮಾರು 20 ವರ್ಷ. ನಿರ್ದೇಶಕ ಎಸ್.ನಾರಾಯಣ್ ಬ್ಲಾಕ್ ಬಸ್ಟರ್ ಸಿನಿಮಾದ ಹಲವು ಮಧುರ ಕ್ಷಣಗಳ ಬಗ್ಗೆ ಮೆಲುಕು ಹಾಕಿದ್ದಾರೆ.
ಸೆನ್ಸೇಷನಲ್ ಸಿನಿಮಾ ಸೂರ್ಯವಂಶ ಹಲವರಿಗೆ ಬ್ರೇಕ್ ನೀಡಿತ್ತು. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಚೊಚ್ಚಲ ನಿರ್ಮಾಣದ ಸೂರ್ಯವಂಶ ಸಿನಿಮಾ ನೂರಾರು ಜನರಿಗೆ ದಾರಿ ಮಾಡಿಕೊಟ್ಟಿತ್ತು.
ಜನಪ್ರಿಯ ನಟ ವಿಷ್ಣುವರ್ಧನ್ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ   ಸಿನಿಮಾದಲ್ಲಿ ನಟಿಸಿದ್ದರು. ಹಲವು ಬ್ಲಾಕ್ ಬ್ಲಸ್ಟರ್ ಸಿನಿಮಾ ನೀಡಿದ್ದರು. ನನ್ನ ವೃತ್ತಿ ಜೀವನದಲ್ಲಿ ಈ ಸಿನಿಮಾ ಕಮರ್ಷಿಯಲ್ ಸಕ್ಸಸ್ ನೀಡಿತ್ತು, ಬಾಕ್ಸ್ ಆಪೀಸ್ ಕಲೆಕ್ಷನ್ ನಲ್ಲಿ  ಅತಿ ಹೆಚ್ಚು ಗಳಿಸಿತ್ತು, ವಿಷ್ಣು ವರ್ದನ್ ಅವರ ಎಲ್ಲಾ ಸಿನಿಮಾಗಳಿಗಿಂತಲೂ ಹೆಚ್ಚು ಈ ಸಿನಿಮಾದಲ್ಲಿ ಕಲೆಕ್ಷನ್ ಆಗಿತ್ತು.
ಇಷಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ್ದರು, ಕನ್ನಡ ಚಿತ್ರರಂಗದಲ್ಲೇ ಸೂರ್ಯವಂಶ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು, ಝೆಂಕಾರ್ ಬೀಟ್ಸ್ ಲೇಬಲ್ ಅಡಿಯಲ್ಲಿ  ಹಾಡುಗಳು ರಿಲೀಸ್ ಆಗಿತ್ತು. ಅದು ಬಿಗ್ ಹಿಟ್ ಆಗಿತ್ತು ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.
ಒಂದು ವೇಳೆ ಸೂರ್ಯವಂಶ ಭಾಗ2  ಮಾಡಬೇಕೆಂದು ಕುಮಾರಸ್ವಾಮಿ ನಿರ್ಧರಿಸಿದರೇ ಇತಿಹಾಸ ಮರುಕಳಿಸುತ್ತದೆ. ಅವರು ಸೂರ್ಯವಂಶ ಸಿನಿಮಾ ಭಾಗ 2 ಮಾಡಿದರೇ ನನ್ನ ಕನಸು ನನಸಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT