ಪುನೀತ್ ಮತ್ತು ಡಾ. ರಾಜ್ ಕುಮಾರ್
ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ನಟ ಪುನೀತ್ ಕುಮಾರ್ ಬ್ಯುಸಿಯಾಗಿದ್ದಾರೆ, ಅದರ ಜೊತೆಗೆ ಜೂನ್ 22 ರಂದು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಆರಂಭವಾಗುವ ಕನ್ನಡ ಕೋಟ್ಯಾಧಿಪತಿ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದಾರೆ.
2011-12 ರಲ್ಲಿ ಪುನೀತ್ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು, ನಟ ಪುನೀತ್ ಈ ಕಾರ್ಯಕ್ರಮ ಒಪ್ಪಿಕೊಳ್ಳಲು 2 ಕಾರಣಗಳಿವೆ, ನಾವು ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ನೋಡಿ ಬೆಳೆದೆವು. ಈ ಕಾರ್ಯಕ್ರಮ ದೇಶವನ್ನು ಒಟ್ಟಿಗೆ ಕರೆತಂದಿತ್ತು, ಭಾಷೆಯ ಹೊರತಾಗಿಯೂ ಇಡೀ ದೇಶದ ಜನ ಅಮಿತಾಬ್ ಬಚ್ಚನ್ ಅವರನ್ನು ನೋಡಲು ಕಾಯುತ್ತಿದ್ದರು. ಇದು ನನಗೆ ಸ್ಪೂರ್ತಿ, ಮತ್ತೊಂದು ಕಾರಣ, ನನ್ನ ತಂದೆ ಡಾ.ರಾಜ್ ಕುಮಾರ್ ಈ ಕಾರ್ಯಕ್ರಮ ಅತಿಯಾಗಿ ಇಷ್ಟ ಪಡುತ್ತಿದ್ದರು, ನಾನು ಈ ಕಾರ್ಯಕ್ರಮ ನಡೆಸಿಕೊಡುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂಬ ಕಾರಣಕ್ಕೂ ನಾನು ಈ ಕಾರ್ಯಕ್ರಮ ಒಪ್ಪಿಕೊಂಡಿದ್ದೇನೆ ಎಂದು ಪುನೀತ್ ಹೇಳಿದ್ದಾರೆ.
ಕಲರ್ಸ್ ಕನ್ನಡದ ಅದೇ ಕಾರ್ಯಕ್ರಮದಲ್ಲಿ ಮತ್ತೆ ನಾನು ಭಾಗವಹಿಸುತ್ತಿರುವುದು ನನಗೆ ಸಂತಸದ ವಿಷಯ, ರಾಜ್ಯದ ವಿವಿಧ ಭಾಗಗಳ ಜನರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ. ಅವರಿಂದ ವೈವಿಧ್ಯಮಯವಾದ ಕಥೆಗಳನ್ನು ಕೇಳಬಹುದು, ಸಾಮಾನ್ಯವಾಗಿ ನಾನು ಜನರ ಜೊತೆ ಮಾತನಾಡಲು ಇಷ್ಟ ಪಡುತ್ತೇನೆ,ಜನರ ಜೊತೆ ಮಾತನಾಡುವ ಅವಕಾಶ ನನಗೆ ಸಿಕ್ಕಿದೆ, ಅವರ ಜೀವನ ನಿರ್ವಹಣೆಗೆ ಹಣ ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳುತ್ತೇನೆ.
ಗೆದ್ದಾಗ ಅವರು ಕಂಡ ಕನಸು ನನಸಾದಾಗ ಅವರಿಗೆ ಸಿಗುವ ಹಣಕ್ಕಿಂತ ಮುಖ್ಯವಾಗಿ ಅವರಿಗೆ ಹಣದ ಅವಶ್ಯಕತೆ ಎಷ್ಟಿದೆ ಎಂಬುದು ತಿಳಿಯಿತ್ತದೆ ಎಂದು ಹೇಳಿದ್ದಾರೆ, ತಮ್ಮ ಜ್ಞಾನದ ಮೂಲಕ ಹಣವನ್ನು ಗೆಲ್ಲುವುದು ನಿಜವಾಗಿಯೂ ವಿಶೇಷ. ಅದನ್ನು ನಾನು ನಡೆಸಿಕೊಡುತ್ತಿರುವುದು ಮತ್ತೊಂದು ವಿಶೇಷ.
ಇನ್ನೂ ರಿಯಾಲಿಟಿ ಶೋ ನಡೆಸಿಕೊಡುವ ಪುನೀತ್ ಕೆಲವೊಂದು ನೀತಿ ನಿಯಮ ಪಾಲಿಸುತ್ತಾರೆ, ಲೈವ್ ಶೋ ಆದರೆ ಎರಡು ಮೂರು ಗಂಟೆ ಮುಂಚಿವಾಗಿಯೇ ಆಗಮಿಸಿ ಅದಕ್ಕಾಗಿ ಬೇಕಾದ ಎಲ್ಲಾ ರೀತಿಯ ಸಿದ್ಧತೆ ನಡೆಸಿಕೊಳ್ಳುತ್ತಾರೆ, ಇದೊಂದು ಟೀಮ್ ವರ್ಕ್ ಆಗಿದ್ದು, ನಾನು ನಿಜವಾಗಿಯೂ ಎಂಜಾಯ್ ಮಾಡುತ್ತೇನೆ ಎಂದು ಪುನೀತ್ ತಿಳಿಸಿದ್ದಾರೆ.
ಕನ್ನಡದ ಕೋಟ್ಯಾಧಿಪತಿಯಲ್ಲಿ ನಿಮ್ಮ ನೆಚ್ಚಿನ ಭಾಗ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಪುನೀತ್, ಜನರ ಜೊತೆ ಮಾತನಾಡುವುದು, ಅವರಿಂದ ಕೆಲವು ವಿಷಯಗಳನ್ನು ಕಲಿತುಕೊಳ್ಳುವುದುಸ ಅವರ ಸಂತೊಷವನ್ನು ಹಂಚಿಕೊಳ್ಳುವುದು, ಗೆದ್ದಾಗ ಅವರ ಖುಷಿಯಲ್ಲಿ ಭಾಗಿಯಾಗವುದು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಇದು ಜನರ ಜೀವನವನ್ನೇ ಬದಲಿಸುವ ಕಾರ್ಯಕ್ರಮ ಇದರ ಹಿಂದೆ ಹಲವರ ಶ್ರಮ ಇದೆ ಎಂದು ತಿಳಿಸಿದ್ದಾರೆ.
ಕನ್ನಡದ ಕೋಟ್ಯಾಧಿಪತಿ ಮೊದಲ ಸೀಸನ್ ಆರಂಭವಾಗುವ ಮುನ್ನ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದೆ, ಈ ವೇಳೆ ಲೆಜೆಂಡ್ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಿದೆ, ಅವರ ನಡವಳಿಕೆ ನನಗೆ ತುಂಬಾ ಹಿಡಿಸಿತು, ಕಾರ್ಯಕ್ರಮದಲ್ಲಿ ಬ್ರೇಕ್ ತೆಗೆದುಕೊಂಡಾಗ ಪ್ರೇಕ್ಷಕರಿಗೆ ನನ್ನನ್ನು ಪರಿಚಯಿಸಿದರು. ಕನ್ನಡದಲ್ಲಿ ನಾನು ಕಾರ್ಯಕ್ರಮ ನಡೆಸುತ್ತಿರುವುದಾಗಿ ಪರಿಚಯ ಮಾಡಿಕೊಟ್ಟರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos