ಕನ್ನಡದ ಯಶಸ್ವಿ ಚಿತ್ರವಾಗಿದ್ದ "ರಂಗಿತರಂಗ" ಬಿಡುಗಡೆಯಾದಾಗಲೇ ಅನೂಪ್ ಭಂಡಾರಿ ಒಬ್ಬ ಉತ್ತಮ ಸಂಗೀತ ನಿರ್ದೇಶಕರಾಗಲಿದ್ದಾರೆ ಎಂದು ಹಲವರು ಭಾವಿಸಿದ್ದರು. ಈಗ "ಆದಿಲಕ್ಷ್ಮಿ ಪುರಾಣ" ಚಿತ್ರದ ಮೂಲಕ ಅನೂಪ್ ಮತ್ತೆ ಹಿನ್ನೆಲೆ ಸಂಗೀತ ಕ್ಷೇತ್ರಕ್ಕೆ ಮರಳಿದ್ದಾರೆ. ಅಲ್ಲದೆ ತಮ್ಮ ಮೊದಲ ಒಲವು ಸಂಗೀತದ ಕಡೆಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
"ನಾನು ಇಂಜಿನಿಯರಿಂಗ್ ಕಲಿಯುವಾಗಲೇ ನನಗೆ ಸಂಗೀತದ ಮೇಲೆ ಒಲವು ಪ್ರಾರಂಭವಾಗಿತ್ತು. ನಾನು ಎಂಟನೇ ವಯಸ್ಸಿನಲ್ಲಿದ್ದಾಗಲೇ ಕೀಬೋರ್ಡ್ ನುಡಿಸುತ್ತಿದ್ದೆ. ಆಗಿನಿಂದ ನನಗೆ ಸಂಗೀತದ ಸ್ಪರ್ಷವಿತ್ತು. ಬಳಿಕ ನಾನು ವಿನೋದಕ್ಕಾಗಿ ಸಾಹಿತ್ಯ ರಚನೆ ಹಾಗೂ ಸಂಗೀತ ಸಂಯೋಜನೆ ಮಾಡತೊಡಗಿದ್ದೆ. ನನ್ನ ಕಾಲೇಜು ದಿನಗಳಲ್ಲಿ, ನಾನು ಸಂಗೀತವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ನಾನು ನಿರ್ಧರಿಸಿದೆ." ಅನೂಪ್ ಹೇಳಿದ್ದಾರೆ.
"ರಂಗಿತರಂಗ", "ರಾಜರಥ" ಚಿತ್ರಗಳಿಗೆ ಸಂಗೀತ ನೀಡಿರುವ ಪ್ರತಿಭಾವಂತ ಸಂಗೀತ ನಿರ್ದೇಶಕ ಅನೂಪ್ ಭಂಡಾರಿ ಇದೀಗ ವಿ. ಪ್ರಿಯಾ ಅವರ ಚೊಚ್ಚಲ ನಿರ್ದೇಶನದ "ಆದಿಲಕ್ಷ್ಮಿ ಪುರಾಣ" ಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಕ್ ಲೈನ್ ಸಂಸ್ಥೆ ನಿರ್ಮಾಣದ ಈ ಚಿತ್ರದಲ್ಲಿ ರಾಧಿಕಾ ಪಂಡಿತ್ ಹಾಗೂ ನಿರೂಪ್ ಭಂಡಾರಿ ಮುಖ್ಯ ಪಾತ್ರದಲ್ಲಿದ್ದಾರೆ.ಚಿತ್ರದ ಆಡಿಯೋ ಇಂದು (ಬುಧವಾರ) ಬಿಡುಗಡೆಯಾಗುತ್ತಿದ್ದು ಮೂರು ಹಾಡುಗಳಿಗೆ ಅನೂಪ್ ಅವರೇ ಸಾಹಿತ್ಯ ರಚಿಸಿದ್ದಾರೆ.
“ವಾಸ್ತವವಾಗಿ ನಾನು ಬರ್ಕ್‌ಲೀ ಕಾಲೇಜ್ ಆಫ್ ಮ್ಯೂಸಿಕ್‌ಗೆ ಸೇರಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ನಿರ್ದೇಶಕರಾಗಿ ಮತ್ತೆ ರಂಗಿತರಂಗ ಮಾಡುವಾಗ ನನ್ನ ಚಿತ್ರಗಳಿಗೂ ಸಂಗೀತ ನೀಡಲು ತಯಾರಾದೆ"
ಆದಿಲಕ್ಶ್ಮಿ ಪುರಾಣದಲ್ಲಿನ ಮೂರು ಹಾಡುಗಳೂ ಸಂದರ್ಭಕ್ಕೆ ತಕ್ಕಂತೆ ಹೊಂದಿಕೆಯಾಗಿದೆ.. “ನನ್ನ ಅಚ್ಚುಮೆಚ್ಚಿನ ಮನಸೇ ಮುಟ್ಟಾಳ ಹಾಡು ಪ್ರೇಮಕಥೆಯಲ್ಲಿ ನಡೆಯುತ್ತಿರುವ ಏರಿಳಿತದ ಬಗ್ಗೆ ಹೇಳಿದ್ದು ಇದು ಒಂದು ಬಗೆಯ ಹಾಸ್ಯ ಮಿಶ್ರಿತವೂ ಆಗಿದೆ. ಅದನ್ನು ನಾನು ಸಾಹಿತ್ಯದ ಮೂಲಕ ಎತ್ತಿ ತೋರಿಸಿದ್ದೇನೆ ”ಎಂದು ಅನೂಪ್ ಹೇಳುತ್ತಾರೆ,ಈ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.
"ಮನಸೇ ಮುಟ್ಟಾಳ ಹಾಡನ್ನು ವಿಜಯ್ ಹಾಗೂ ಸುಪ್ರಿಯಾ ಲೋಹಿತ್ ಹಾಡಿದ್ದಾರೆ. , ಈ ನಿರ್ದಿಷ್ಟ ಟ್ರ್ಯಾಕ್ ಪ್ರೇಮಲೋಕ ಚಿತ್ರದ "ನೋಡಮ್ಮ ಹುಡುಗಿ" ಹಾಡನ್ನು ನೆನಪಿಸುವಂತಿದೆ." ಅನೂಪ್ ಹೇಳಿದ್ದಾರೆ. ಇನ್ನು ಬೂಂ ಬೂಂ ಎಂಬ ಎರಡನೇ ಹಾಡು ಸಂಚಿತ್ ಹೆಗ್ಡೆ ಮತ್ತು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಮೂರನೇ ಹಾಡಾದ ಮಧು ಸುಲು ಒಂದು ಹೈ ಎನರ್ಜಿ ಪ್ಯಾಥೊ ಸಾಂಗ್ ಆಗಿದ್ದು ಇದನ್ನು ಸಿದ್ದಾರ್ಥ್ ಬೆಳ್ಮಣ್ಣು ಹಾಡಿದ್ದಾರೆ.
"ಸಂಗೀತ ನಿರ್ದೇಶಕನಾಗಿ ನಾನು ಕನ್ನಡ ಪದಗಳನ್ನು ಮಾತ್ರ ಬಳಸುತ್ತೇನೆ ಮತ್ತು ಹೆಚ್ಚು ಆಡುಭಾಷೆಯನ್ನು ಬಳಸುವುದಿಲ್ಲ. ಈ ಚಿತ್ರದ ಸಂಗೀತ ನನ್ನ ಹಿಂದಿನ ಎರಡಕ್ಕಿಂತ ಸ್ವಲ್ಪ ಭಿನ್ನವಾಗಿದೆ. ರಂಗಿತರಂಗ ಹೆಚ್ಚು ಜನರನ್ನು ತಲುಪಿದೆ. ರಾಜರಥ ಸುಮಧುರ ವಾದ್ಯವೃಂದದ ಹಿನ್ನೆಲೆಯನ್ನು ಹೊಂದಿತ್ತು.ಆದರೆ ಆದಿಲಕ್ಷ್ಮಿ ಪುರಾಣದಲ್ಲಿ ಉತ್ಸಾಹಭರಿತ ಧ್ವನಿಗಳಿದೆ." ಎಂದು ಅವರು ಹೇಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos