ಸಿನಿಮಾ ಸುದ್ದಿ

'ನಂದನವನದೊಳ್ 'ಎಂಬ ಕೊಡಗು ಮೂಲದ ಸಸ್ಪ್ರೆನ್ಸ್ ಸ್ಟೋರಿ

Raghavendra Adiga
ಕಾದಂಬರಿ ಆಧಾರಿತ ಸಂದೀಪ್ ಶೆಟ್ಟಿ ವಿಟ್ಟಲ್ ನಿರ್ದೇಶನದ ನಂದನವನದೊಳ್ ಚಿತ್ರವು ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವಾಗಿದೆ.ಕುತೂಹಲಕಾರಿ ಸಂಗತಿಯೆಂದರೆ, ಈ ಚಿತ್ರವನ್ನು ಕೊಡಗು ಮತ್ತು ಬೆಂಗಳೂರಿನಲ್ಲಿಚಿತ್ರೀಕರಿಸಲಾಗಿದ್ದು ಮುಖ್ಯವಾಗಿ ಕೊಡಗು ಜಿಲ್ಲೆ ಜನರನ್ನು ಒಳಗೊಂಡಿರುವ ಪಾತ್ರವನ್ನು ಆಯ್ಕೆ ಮಾಡಿದ್ದಾರೆ.
"ಈ ಚಿತ್ರವು ಕೊಡಗು ಸಂಸ್ಕೃತಿ ಮತ್ತು ಕ್ರೀಡೆಗಳ ಮೇಲೆ ಆಧಾರಿತವಾಗಿದೆ.ಜತೆಗೆ ಹಾಸ್ಯ, ಮತ್ತು ಸಸ್ಪೆನ್ಸ್‌ ಕಥಾನಕವನ್ನು ಹೊಂದಿದೆ"ನಿರ್ದೇಶಕರು ಹೇಳುತ್ತಾರೆ. ಈ ಕಥಾನಕದಲ್ಲಿ ಬುದ್ದಿವಂತ, ವೃತ್ತಿಪರ ಕೊಲೆಗಾರನೊಬ್ಬನನ್ನು ಪತ್ತೆ ಮಾಡಲು ಕಾದಂಬರಿಯೊಂದು ತನಿಖಾಧಿಕಾರಿಗಳಿಗೆ ಸಹಾಯ ಮಾಡಲಿದೆ ಎಂದು ಅವರು ಚಿತ್ರದ ಕಥೆ ಬಗೆಗೆ ಸುಳಿವು ನೀಡಿದ್ದಾರೆ.
ಯಕ್ಷಸಿರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಭರತ್ ರೌಯಿಸಂತೋಷ್ ಶೆಟ್ಟಿ, ಆನಂದ್ ಯದ್ವಾಸ್ಡ್, ವಚೀರಾ ವಿಟ್ಟಲ್ ನಾಣಯ್ಯ ಹಾಗೂ  ಕಂಪನಾ ನಟಿಸಿದ್ದಾರೆ. ಶರಣ್ ಪೂನಾಚ ಮತ್ತು ಉಮೇಶ್ ಹೆಬ್ರಿ ನಿರ್ಮಿಸಿದ ನಂದನವನದೊಳ್ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣಪತ್ರವನ್ನು ಪಡೆದಿದ್ದು, ಜುಲೈನಲ್ಲಿ ಬಿಡುಗಡೆಯಾಗಲಿದೆ.
SCROLL FOR NEXT