ದೇವಕಿ ಸಿನಿಮಾ ಪೋಸ್ಚರ್ 
ಸಿನಿಮಾ ಸುದ್ದಿ

ನೈಜ ಕಥೆಯಾಧಾರಿತ ದೇವಕಿ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ: ನಿರ್ದೇಶಕ ಲೋಹಿತ್

ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ, ...

ಮಮ್ಮಿ ಸೇವ್ ಮಿ ಯಂತಹ ಹಾರರ್ ಸಿನಿಮಾ ನೀಡಿದ ನಿರ್ದೇಶಕ ಲೋಹಿತ್, ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ ದೇವಕಿ ಎಂಬ ಥ್ರಿಲ್ಲರ್ ಸಿನಿಮಾ ನಿರ್ದೇಶಿಸಿದ್ದಾರೆ.
ಎರಡು ವರ್ಷಗಳ ನಂತರ ಪ್ರಿಯಾಂಕಾ ಉಪೇಂದ್ರ ಮತ್ತು ಲೋಹಿತ್ ಕಾಂಬಿನೇಷನ್ ನಲ್ಲಿ ದೇವಕಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 
ಲೋಹಿತ್ ಯಾವಾಗಲೂ ರೌಡಿಗಳ ಕಥೆಯಾಧಾರಿತ ಸಿನಿಮಾ ಕಡೆ ವಾಲುತ್ತಿದ್ದರು, ಹೀಗಾಗಿ ಅವರು ಸಿನಿಮಾ ಇಂಡಸ್ಟ್ರಿಗೆ ಬಂದರು,  ನನ್ನ ಸ್ಕೂಲ್ ಬಾಯ್ ನೋಡಿದ  ನಿರ್ಮಾಪಕರಿಗೆ ಮತ್ತು ನಟರಿಗೆ ಬೇರೆ ಅಭಿಪ್ರಾಯ ಮೂಡಿತು. ಗ್ಯಾಂಗ್ ಸ್ಟರ್ ರೀತಿಯ ಕಥೆ ನಿರ್ದೇಶನ ನೀಡಿದರೇ ಇವರಿಗೆ ಕೆಲಸ ಮಾಡಲು ಸಾಧ್ಯವೇ ಎಂಬ ಯೋಚನೆ ಮೂಡಿತ್ತು ಎಂದು ಲೋಹಿತ್ ತಿಳಿಸಿದ್ದಾರೆ.
ನಾನು ಮಮ್ಮಿ ಸೇವ್ ಮಿ ಭಾಗ 2 ಮಾಡಲು ಆಲೋಚಿಸಿದ್ದೆ, ಆದರೆ ಕಥೆಗೆ ಹಿಮಪಾತವಾಗುವ ಸನ್ನಿವೇಶಗಳಲ್ಲಿ ಶೂಟಿಂಗ್ ಮಾಡುವ ಅವಶ್ಯಕತೆಯಿತ್ತು, ಇದೇ ವೇಳೆ ಕೊಲ್ಕೋತಾದ ಒಂದು ಸ್ಥಳದ ಬಗ್ಗೆ ನಾನು ಒಂದು ಲೇಖನ ಓದಿದ್ದೆ, ಇದು ಕುಟುಂಬವೊಂದು ತಮ್ಮ ಮಕ್ಕಳನ್ನು ಕಳೆದುಕೊಳ್ಳುವ ಬಗೆಗಿನ ಕಥೆಯಾಗಿತ್ತು, ಅದು ನನ್ನ ಗಮನ ಸೆಳೆಯಿತು, ಅದೇ ದೇವಕಿ ಸಿನಿಮಾ ಮೂಲ ಕಥೆಯಾಗಿದೆ ಎಂದು ಲೋಹಿತ್ ತಿಳಿಸಿದ್ದಾರೆ.
ಆರು ವರ್ಷಗಳ ನಂತರವೂ ತಾಯಿಯೊಬ್ಬಳು ತನ್ನ ಮಗ ಬರುತ್ತಾನೆ ಎಂಬ ಭರವಸೆಯೊಂದಿಗೆ ಲೋಟದಲ್ಲಿ ಹಾಲು ಹಿಡಿದುಕೊಂಡು ನಿಲ್ಲುತ್ತಾಳೆ ಎಂಬ ಕಥೆ ಇದಾಗಿತ್ತು, ಅದರಲ್ಲಿ ಕೆಲವು ಅಂಶಗಳನ್ನು ತೆಗೆದುಕೊಂಡು ಸಿನಿಮಾ ಕಥೆಗೆ ಹೊಂದುವ ರೀತಿ ಬದಲಾಯಿಸಿಕೊಂಡಿದ್ದೇನೆ, ಘಟನೆ ನಡೆದ ಪ್ರದೇಶದಲ್ಲೇ ಶೂಟಿಂಗ್ ಮಾಡಲು ನಿರ್ಧರಿಸಿದೆ, 
ದೆಹಲಿ ಮತ್ತು ಕೊಲ್ಕೊತಾದಲ್ಲಿ ಪ್ರತಿ 10 ನಿಮಷಕ್ಕೊಮ್ಮೆ ಒಂದು ಮಗುವಿನ ಕಿಡ್ನಾಪ್ ಆಗುತ್ತಿರುತ್ತದೆ. ಇದನ್ನು ಹೈಲೈಟ್ ಮಾಡಲು ನಾನು ಮುಂದಾದೆ, ನಮ್ಮ 10 ಸಿನಿಮಾದಲ್ಲಿ 10 ಮೌಲ್ಯಗಳು ಇವೆ, ಸಿನಿಮಾ ನಿಮ್ಮನ್ನು ಅಳಿಸುತ್ತದೆ ಹಾಗೆಯೇ ನಗಿಸುತ್ತದೆ ಎಂದು ಹೇಳಿದ್ದಾರೆ.
ಇದೊಂದು ಮಹಿಳಾ ಪ್ರಧಾನ ಸಿನಿಮಾವಾದ್ದರಿಂದ ನಾನು ಪ್ರಿಯಾಂಕಾ ಉಪೇಂದ್ರ ಅವರನ್ನೇ ಆಯ್ಕೆ ಮಾಡಿಕೊಂಡೆ, ಅವರ ಜೊತೆ ವರ್ಷಕ್ಕೊಂದು ಸಿನಿಮಾ ಮಾಡುವ ಬಯಕೆ ವ್ಯಕ್ತ ಪಡಿಸಿರುವ ಲೋಹಿತ್ , ನನ್ನ ಆಸೆಯ ಕಥೆಯಂತೆ ದೇವಕಿ ಸಿನಿಮಾ ನಿರ್ದೇಶನ ಮಾಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ