ನಟಸಾರ್ವಭೌಮ 
ಸಿನಿಮಾ ಸುದ್ದಿ

25 ದಿನ ಪೂರೈಸಿದ 'ನಟಸಾರ್ವಭೌಮ', ಚಿತ್ರತಂಡದಿಂದ ರಾಜ್ಯಾದ್ಯಂತ ಸಕ್ಸಸ್ ಟೂರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯದ "ನಟಸಾರ್ವಭೌಮ" ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸದ್ದು ಮಾಡುತ್ತಿದೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಇದೀಗ 200 ಕ್ಕೂ ಹೆಚ್ಚಿನ ಕೇಂದ್ರ.....

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯದ "ನಟಸಾರ್ವಭೌಮ" ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸದ್ದು ಮಾಡುತ್ತಿದೆ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಇದೀಗ 200 ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ 25 ದಿನಗಳನ್ನು ಪೂರ್ಣಗೊಳಿಸಿದೆ.  ಈ ಸಂತಸದ ಕ್ಷಣದಲ್ಲಿ ಚಿತ್ರತಂಡ ಭಾನುವಾರವು ಚಿತ್ರದ ಯಶಸ್ಸಿನ ಕಾರಣ ಸಕ್ಸಸ್ ಟೂರ್ ಹಮ್ಮಿಕೊಂಡಿದೆ.
ಹಾವೇರಿ, ದಾವಣಗೆರೆ, ಚಿತ್ರದುರ್ಗ, ರಾಣಿಬೆನ್ನೂರು, ಹಿರಿಯೂರು, ಶಿರಾ, ತುಮಕೂರು ಸೇರಿದಂತೆ ಕರ್ನಾಟಕದ ನಾನಾ ಕಡೆ "ನಟಸಾರ್ವಭೌಮ" ಚಿತ್ರತಂಡದ ಸದಸ್ಯರು ಪ್ರವಾಸ ಕೈಗೊಳ್ಳಲಿದ್ದಾರೆ. ಸದ್ಯ ಧಾರವಾಡದಲ್ಲಿ "ಯುವರತ್ನ" ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪುನೀತ್ ಭಾನುವಾರ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿ "ನಟಸಾರ್ವಭೌಮ" ಚಿತ್ರದ ಯಶಸ್ಸಿನ ಸಂತಸವನ್ನು ಹಂಚಿಕೊಳ್ಳುತ್ತಾರೆ.
ರೋಚಕ ಕಥಾನಕದ ಚಿತ್ರದಲ್ಲಿ ನಟ ಪುನೀತ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ರಚಿತಾ ರಾಮ್, ಅನುಪಮಾ ಪರಮೇಶ್ವರನ್, ರವಿಶಂಕರ್ ಹಾಗು ಚಿಕ್ಕಣ್ಣ ಸೇರಿ ಮಹತ್ವದ ನಟ ನಟಿಯರು ತೆರೆ ಹಂಚಿಕೊಂಡಿದ್ದಾರೆ.ಮದ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಚಿತ್ರ ಯಶಸ್ವಿಯಾಗಿ ನಾಲ್ಕನೇ ವಾರದ ಪ್ರದರ್ಶನ ಕಾಣುತ್ತಿದ್ದು ಆಸ್ಟ್ರೇಲಿಯಾ ಹಾಗು ಜರ್ಮನಿಗಳಲ್ಲಿ ಸಹ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್