ರಾಜ್ ಬಿ ಶೆಟ್ಟಿ 
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಇಬ್ಬರು ಹೀರೋಗಳು

ಒಂದು ಮೊಟ್ಟೆಯ ಕಥೆ ' ಚೊಚ್ಚಲ ಚಿತ್ರ ನಿರ್ದೇಶನ ಹಾಗೂ ನಟನಾ ಕೌಶಲ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ರಾಜ್ ಬಿ ಶೆಟ್ಟಿ ಇದೀಗ 'ಹರಿಹರ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರು:'ಒಂದು ಮೊಟ್ಟೆಯ ಕಥೆ ' ಚೊಚ್ಚಲ ಚಿತ್ರ ನಿರ್ದೇಶನ ಹಾಗೂ ನಟನಾ ಕೌಶಲ್ಯದ ಮೂಲಕ ಕನ್ನಡ  ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ಧಿಗೆ ಬಂದ ರಾಜ್ ಬಿ ಶೆಟ್ಟಿ ಇದೀಗ  'ಹರಿಹರ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮುಂದಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸಿಟಿ ಎಕ್ಸ್ ಪ್ರೆಸ್ ಗೆ ಈ ವಿಷಯ ತಿಳಿಸಿರುವ ರಾಜ್, ಈ ಚಿತ್ರದಲ್ಲಿ ಇಬ್ಬರು ಹಿರೋಗಳು ಇರಲಿದ್ದಾರೆ. ತಾನೇ ಹಿರೋ ಆಗಿದ್ದು, ಮತ್ತೊಬ್ಬರನ್ನು ಸದ್ಯದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

  ಪ್ರಸ್ತುತ ಗಾಂಧಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಕಥೆ ಸಿದ್ದವಾಗಿದೆ. ಮೇ ಮಧ್ಯಭಾಗದಿಂದ ಚಿತ್ರೀಕರಣ ಆರಂಭಿಸಲಾಗುವುದು. ಮತ್ತೊಬ್ಬ ಹೀರೋವನ್ನು  ಅಂತಿಮಗೊಳಿಸಿದ ನಂತರ ನನ್ನ ಭಾಗವನ್ನು ಆರಂಭಿಸುತ್ತೇನೆ. ಈಗ ಲೋಕೇಷನ್ ಅಂತಿಮಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಬ್ರಹ್ಮ ಮತ್ತು ವಿಷ್ಣು ನಡುವಿನ ಪ್ರತಿಷ್ಠೆಯ  ಸಂಘರ್ಷ ವರ್ಣಿಸುವ ಯಕ್ಷಗಾನ ನಾಟಕ ಶ್ರೀ ದೇವಿ ಮಹಾತ್ಮೆ  ಸೀಕ್ವೆನ್ಸ್  ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದನ್ನು ಸಮಕಾಲಕ್ಕೆ ಹೊಂದಿಕೊಳ್ಳುವಂತೆ ಪುನರ್ ರಚಿಲಾಗಿದೆ.
ಮಾನವರಂತೆ ದೇವಮಾನವರಲ್ಲಿಯೂ ಪ್ರತಿಷ್ಠೆಕಾಗಿ ನಡೆಯುವ ಕಾದಾಟದಂತೆ ಇಬ್ಬರು ನಾಯಕರ ನಡುವಿನ ಸಂಘರ್ಷ ಚಿತ್ರದಲ್ಲಿ ಸಾಗಲಿದೆ. ಇಂದಿನ ಪ್ರೇಕ್ಷಕರಿಗೆ ಅದು ಇಷ್ಟವಾಗಲಿದೆ ಎಂಬ ನಂಬಿಕೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!

ರನ್‌ವೇಯಿಂದ ಜಾರಿದ ಅಮೆಜಾನ್ ಕಾರ್ಗೋ ವಿಮಾನ; ವಾಹನಗಳಿಗೆ ಡಿಕ್ಕಿ, ಕನಿಷ್ಠ ಐವರು ಸಾವು!

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕುಗಳ ಮಾರಾಟ? ರಾಜಮೌಳಿಗೆ ತಲೆಬಿಸಿ!